ಮುಂಬಯಿ: ಉಪನಗರದ ಚೆಂಬೂರು ಗೋವಂಡಿ ಪೂರ್ವದ ಆಶಾ ನಿವಾಸ್ ಕೋ.ಅಪರೇಟಿವ್ ಹೌಸಿಂಗ್ ಸೊಸೈಟಿ ನಿವಾಸಿ ನ್ಯಾಯವಾದಿ ಸುಧಾಕರ್ ಅಂಚನ್ (೫೨)  ಮಾ.೧೫ರಂದು ಮಂಗಳವಾರ ಅಲ್ಪಕಾಲದ ಅನಾರೋಗ್ಯದಿಂದ ತನ್ನ ಆಶಾ ನಿವಾಸ್ ಸ್ವಗೃಹದಲ್ಲಿ ನಿಧನರಾದರು.Sudhakar Anchan

ಉಡುಪಿ ಎರ್ಮಾಳ್ ತೊಟ್ಟಂ ಇಲ್ಲಿನ ಮಾತೃಛಾಯಾ ನಿವಾಸಿ ಆಗಿದ್ದ ಸುಧಾಕರ್ ತಾಯಿ, ಸುಪುತ್ರ, ಸಹೋದರ, ಸಹೋದರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಆಕಾಶವಾಣಿ ಮುಂಬಯಿ ಇದರ ಮಾಜಿ ಸಿಬ್ಬಂದಿಯಾಗಿದ್ದು, ಲೇಖಕ ಹಾಗೂ ಇಂಗ್ಲೀಷ್ ಬರಹಗಾರನಾಗಿದ್ದು, ಟೈಮ್ಸ್ ಆಫ್ ಇಂಡಿಯಾ ಆಂಗ್ಲ ದೈನಿಕದ ಚೆಂಬೂರು ಪ್ರಾದೇಶಿಕ ವರದಿಗಾರ ಆಗಿ ಸೇವಾನಿರತರಾಗಿದ್ದರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಚೆಂಬೂರು ಸ್ಥಳೀಯ ಸಮಿತಿ ಸದಸ್ಯರಾಗಿ, ಕರ್ನಾಟಕ ಸಂಘ ಭಾಂಡೂಪ್ ಇದರ ಮಾಜಿ ಕಾರ್ಯದರ್ಶಿ, ಕರ್ನಾಟಕ ಸಂಘ ಚೆಂಬೂರು ಇದರ ಕಾರ್ಯಕಾರಿ ಸಮಿತಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದಾರೆ.

By suddi9

Leave a Reply

Your email address will not be published. Required fields are marked *