ರಾಂಚಿ: ಅಕ್ರಮ ಕಲ್ಲಿದ್ದಲು ಗಣಿ ಕುಸಿದಿರುವ ಪರಿಣಾಮ 13 ಮಂದಿ ಸಾವನ್ನಪ್ಪಿ ಹಲವರು ಅವಶೇಷಗಳಡಿ ಸಿಲುಕಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.  

ಜಾರ್ಖಂಡ್ ರಾಜ್ಯದ ಧನ್‌ಬಾದ್‌ನ ನಿರ್ಸಾ ಬ್ಲಾಕ್‌ನ ಇಸಿಎಲ್ ಮುಗ್ಮಾ ಪ್ರದೇಶದಲ್ಲಿರುವ ಅಕ್ರಮ ಗಣಿಯಲ್ಲಿ ಈ ಘಟನೆ ನಡೆದಿದೆ. ಗಣಿಗಾರಿಕೆಗೆ ಬಳಸುತ್ತಿದ್ದ ಉಪಕರಣ 20 ಅಡಿ ಎತ್ತರದಿಂದ ಬಿದ್ದ ಪರಿಣಾಮ ಕೊರೆದಿದ್ದ ಗಣಿ ಕುಸಿದಿದೆ. ಇದರಿಂದ ಅವಶೇಷಗಳಡಿ ಸಿಲುಕಿದ 13 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 10 ಕ್ಕೂ ಹೆಚ್ಚು ಮಂದಿ ಸಿಲುಕಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *