ಮುಂಬಯಿ: ಸೊಸೈಟಿ ಆಫ್ ದಿ ಡಿವೈನ್ ವರ್ಡ್ (ಎಸ್‌ವಿಡಿ) ಧಾರ್ಮಿಕ ಸಭಾ ಧರ್ಮಗುರು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಸಂಗೀತ ಅಭಿನಯ್ ಅಕಾಡೆಮಿ (ಎಸ್‌ಎಎ) ಇದರ ಸಂಸ್ಥಾಪಕ ನಿರ್ದೇಶಕ, ಭಾರತೀಯ ಸಂಗೀತ ಗಾಯನದ ಗಾನ ಗಾಂಧರ್ವ, ಪೂರ್ವ ಮತ್ತು ಪಾಶ್ಚಾತ್ಯ ಸಂಗೀತ ಸಮ್ಮಿಲನಗಳ ಸಂಯೋಜಕ, ಸಂಗೀತದ ಪ್ರತಿಭಾನ್ವಿತ ಕಲಾವಿದ ಡಾ| ರೆ| ಫಾ| ಚಾರ್ಲ್ಸ್ ವಾಸ್ (೭೭.) ಮುಂಬಯಿ ಅಂಧೇರಿ ಪೂರ್ವದ ಮಹಾಕಾಳಿ  ಎಸ್‌ವಿಡಿ ಸಮೂಹದ ಗ್ಯಾನ್‌ ಆಶ್ರಮದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನ.30 ರಂದು ಮಂಗಳವಾರ ನಿಧನ ಹೊಂದಿದರು.Dr. Fr. Charles Vas A

ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ (ಮಂಗಳೂರು ಡಯಾಸಿಸ್) ಬಂಟ್ವಾಳ ತಾಲೂಕು ಫರಂಗಿಪೇಟೆ ಓಮ್ಜೂರ್ ಇಲ್ಲಿನ ಜಾಕೋಬ್ ಮತ್ತು ಸೆರಾಫೈನ್ ವಾಸ್ ದಂಪತಿ (ಸ್ವರ್ಗಸ್ಥರು) ಸುಪುತ್ರರಾಗಿದ್ದ ಫಾ| ಚಾರ್ಲ್ಸ್, ಓರ್ವ ಸಹೋದರ (ಮುಂಬಯಿ ಹೈಕೋರ್ಟ್ ವಕೀಲ, ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್‌ನ ನಿರ್ದೇಶಕ ನ್ಯಾ| ಪಿಯೂಸ್ ವಾಸ್), ಒರ್ವ ಧರ್ಮ ಭಗಿನಿ ಸಹೋದರಿ ಸಿ| ಬರ್ನಡಿಟಾ ಎಸಿ ಸೇರಿದಂತೆ ಸಾವಿರಾರು ನೃತ್ಯ ಮತ್ತು ಸಂಗೀತ ಕಲಾವಿದ ಶಿಷ್ಯಂದಿರು ಹಾಗೂ ಲಕ್ಷಾಂತರ ಸಂಗೀತಾಭಿಮಾನಿಗಳನ್ನು ಅಗಲಿದ್ದಾರೆ.Fr Charles Vaz(b)

ಡಾ| ರೆ| ಫಾ| ಚಾರ್ಲ್ಸ್ ವಾಸ್:
೧೯೫೯ರಲ್ಲಿ ಸೊಸೈಟಿ ಆಫ್ ದಿ ಡಿವೈನ್ ವರ್ಡ್ (ಎಸ್‌ವಿಡಿ) ಸೇರಿದ್ದರು. ೧೩ನೇ ವಯಸ್ಸಿನಲ್ಲೇ ಮಧ್ಯಪ್ರದೇಶದ ಮೊಹೋ ಮತ್ತು ಇಂದೋರ್‌ನಲ್ಲಿ ತದನಂತರ ಪುಣೆಯ ಎಸ್‌ವಿಡಿ ಸೆಮಿನರಿಯಲ್ಲಿ ತಮ್ಮ ಧಾರ್ಮಿಕ ತರಬೇತಿ ಮುಂದುವರಿಸುತ್ತಿದ್ದಂತೆಯೇ ತಾತ್ವಿಕ ಅಧ್ಯಯನದ ಸಮಯದಲ್ಲಿ ಏಕಕಾಲದಲ್ಲಿ ತಮ್ಮ ಧರ್ಮಗುರು ತರಬೇತಿ ಮತ್ತು ಸಂಗೀತ ಅಧ್ಯಯನ ಮುಂದುವರೆಸಿದ್ದರು. ನಂತರ ಮುಂಬಯಿನ ಸೇಂಟ್ ಕ್ಸೇವಿಯರ್ ಕಾಲೇಜ್‌ನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆಯುತ್ತಿದ್ದಾಗ, ಕ್ರಿಯಾತ್ಮಕ ಥೆರೆಸಿಯನ್ ಕಾಯಿರ್‌ನ್ನು ಸ್ಥಾಪಿಸಿದ್ದರು. ಬಾಂದ್ರಾದಲ್ಲಿನ ಸೇಂಟ್ ಥೆರೆಸಾ ಚರ್ಚ್ ನಲ್ಲಿ ನೆಲೆಯಾಗಿ ಹಲವಾರು ಥೆರೆಸಿಯನ್ ಮ್ಯೂಸಿಕಲ್ ನೈಟ್ಸ್ ನಡೆಸಿ ಆ ಮೂಲಕ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿ ಪ್ರಸಿದ್ಧರೆಣಿಸಿದ್ದರು. ೧೯೭೬ರಲ್ಲಿ ಗುರುದೀಕ್ಷೆ ಪಡೆದು ಧರ್ಮಗುರು ಆಗಿದ್ದರು.Fr Charles Vaz(c)

ಸ್ನೇಹಿತರಲ್ಲಿ ಪ್ರೀತಿಯಿಂದ ಚಾರ್ಲೀ ಎಂದೇ ಪರಿಚಿತ ಫಾ| ಚಾರ್ಲ್್ಸ, ಗಾಯನ ಮತ್ತು ನೃತ್ಯದ ಸಾರ್ವತ್ರಿಕ ಭಾಷೆಯ ಮೂಲಕ ಪ್ರೀತಿ ಮತ್ತು ಶಾಂತಿಯ ಸುವಾರ್ತೆ ಸಂದೇಶ ವ್ಯಾಪಿಸಲು ಸಂಗೀತಗುರು ದಿ| ಆರ್ಥರ್ ಪಿರೇರಾ ನೇತೃತ್ವದಲ್ಲಿ ಉತ್ಸಾಹಿ ಮತ್ತು ಸಮಾನ ಮನಸ್ಸಿನ ಸಹಯೋಗಿಗಳ ಸಕ್ರಿಯ ಸಹಕಾರದೊಂದಿಗೆ ೧೯೮೦ರಲ್ಲಿ ಮುಂಬಯಿ ಬಾಂದ್ರಾದಲ್ಲಿ ಸಂಗೀತ ಅಭಿನಯ್ ಅಕಾಡೆಮಿ ಸ್ಥಾಪಿಸಿದ್ದರು. ಆ ಮೂಲಕ ರಾಷ್ಟçದಾದ್ಯಂತದ ಸಾವಿರಾರು ಪ್ರತಿಭಾನ್ವಿತ ಸಂಗೀತ ಮತ್ತು ನೃತ್ಯ ಪ್ರತಿಭೆಗಳಿಗೆ ವೇದಿಕೆ ರೂಪಿಸಿ, ಆಧುನಿಕ ಹೊಸ ಸಂಪನ್ಮೂಲಗಳನ್ನು ಬಳಸುತ್ತಾ ದೇಶವಿದೇಶಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡುತ್ತಾ ಅಪ್ರತಿಮ ಪ್ರತಿಭಾನ್ವೇಷಣೆ ಪ್ರದರ್ಶಿಸಿದ್ದರು.

ಪೋಪ್ ಜಾನ್ ಪೌಲ್-II, ಮದರ್ ತೆರೇಸಾ ಮತ್ತಿತರ ಪುನೀತ ಸಂತರಿAದ ಅನುಗ್ರಹಿಸಲ್ಪಟ್ಟ ಫಾ| ಚಾರ್ಲ್್ಸ ಗಿಟಾರ್ ಮತ್ತು ಪಿಯಾನೋ ಸಾಧನವನ್ನು ವೃತ್ತಿಪರವಾಗಿ ಅಭ್ಯಾಸಿಸಿದ್ದು, ಸಂಗೀತ ಆಕಾಂಕ್ಷೆಗಳಿಗೆ ದೃಢವಾದ ಅಭಿವ್ಯಕ್ತಿ ನೀಡಿದ್ದು ನಂತರ ಹಿಂದೂಸ್ತಾನಿ ಸಂಗೀತದ ಮಹಾನ್ ಪ್ರತಿಪಾದಕ ಪಂಡಿತ್ ವಿಷ್ಣು ದಿಗಂಬರ್ ಅವರ ಶಿಷ್ಯರಾದ ಗುರು ರಾಮಕೃಷ್ಣ ಜೋಶಿ ಅವರ ಮಾರ್ಗದರ್ಶನದಲ್ಲಿ ಭಾರತೀಯ ಶಾಸ್ತಿçÃಯ ಸಂಗೀತದಲ್ಲಿ ಸಾರಭೂತ ಪಚಾರಿಕ ತರಬೇತಿ ಪಡೆದರು. ೧೯೮೩ರಲ್ಲಿ ಇವರ ಈಸ್ಟ್ ಮೀಟ್ಸ್ ವೆಸ್ಟ್ ಎಂಬ ಪ್ರಬಂಧಕ್ಕೆ ಮಿರಾಜ್‌ನ ಅಖಿಲ ಭಾರತೀಯ ಗಾಂಧರ್ವ ಸಂಗೀತ ವಿಶ್ವವಿದ್ಯಾಲಯವು ಡಾಕ್ಟರೇಟ್ ಪ್ರದಾನಿಸಿತ್ತು. ಆ ಮೂಲಕ ಭಾರತೀಯ ಸಂಗೀತ ಗಾಯನದಲ್ಲಿ ಡಾಕ್ಟರೇಟ್ ಪಡೆದÀÄ ಪೂರ್ವ ಮತ್ತು ಪಾಶ್ಚಾತ್ಯ ಸಂಗೀತದ ನೂರಾರು ಸಮ್ಮಿಲನಗಳನ್ನು ಸಂಯೋಜಿಸುತ್ತಾ ಲಂಡನ್‌ನ ಪ್ರಸಿದ್ಧ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನಿಂದ ಪಾಶ್ಚಾತ್ಯ ಸಂಗೀತದಲ್ಲಿ ಪದವಿ ಪಡೆದಿದ್ದಾರೆ.

ಸಂಗೀತ ಅಭಿನಯ್ ಅಕಾಡೆಮಿ ೨೦೦೬ರಲ್ಲಿ ಬೆಳ್ಳಿ ಮಹೋತ್ಸವ ಸಂಭ್ರಮಿಸಿದ್ದು ಸದ್ಯ ಈ ಸಂಸ್ಥೆ ನಾಲ್ಕು ದಶಕಗಳ ಸಾರ್ಥಕೆತೆಯಲ್ಲಿ ಮುನ್ನಡೆಯುತ್ತಿದೆ. ಸಂಗೀತದ ಮೂಲಕ ಪ್ರಪಂಚದಾದ್ಯAತದ ಸುತ್ತಾಡಿ ಸಾಧನೆಗಳ ಸರದಾರರಾಗಿದ್ದ ಫಾ| ಚಾರ್ಲ್್ಸ, ಹಿಂದಿ, ಮಲಯಾಳಂ, ಕೊಂಕಣಿ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ೩೫ ಸಂಪುಟಗಳ ಆಡಿಯೊ ಕ್ಯಾಸೆಟ್‌ಗಳನ್ನು ಮತ್ತು ಸಿಡಿಗಳನ್ನು ನಿರ್ಮಿಸಿ ಜನಮಾನಸದಲ್ಲಿ ಜನಪ್ರಿಯ ವಾದ್ಯ ಸಂಗೀತವನ್ನು ನಿರ್ಮಿಸಿದ್ದಾರೆ. ಜೊತೆಗೆ ಆಕಾಶವಾಣಿ ಮತ್ತು ದೂರದರ್ಶನಗಳಲ್ಲೂ ಕಾರ್ಯಕ್ರಮ, ವಿವಿಧ ಪ್ರಾರ್ಥನಾ ಸಭೆಗಳಲ್ಲಿ ಪ್ರಾರ್ಥನೆ ನೃತ್ಯಗಳನ್ನು ಪ್ರಸ್ತುತಪಡಿಸಿದ್ದಾರೆ ಮತ್ತು ಭಾರತೀಯ ಮತ್ತು ಪಾಶ್ಚಿಮಾತ್ಯ ಧಾರ್ಮಿಕ ಮತ್ತು ಪವಿತ್ರ ಸಂಗೀತದ ಬಗ್ಗೆ ಕಾರ್ಯಾಗಾರಗಳನ್ನು ನೀಡಿದ್ದಾರೆ. ಧಾರ್ಮಿಕ, ಸಾಮಾಜಿಕ ಮತ್ತು ರಾಷ್ಟಿçÃಯ ವಿಷಯಗಳ ಕುರಿತು ೨೫ ಮೆಗಾ ಬ್ಯಾಲೆಗಳನ್ನು ರಚಿಸಿ ವಿಭಿನ್ನ ಸಂದರ್ಭಗಳಲ್ಲಿ, ಕೆಲವೊಮ್ಮೆ ವೇದಿಕೆಯಲ್ಲಿ ೧೫೦೦ ಪ್ರದರ್ಶನಕಾರರು, ಆನೆಗಳು, ಕುದುರೆಗಳು ಮತ್ತು ಕುರಿಗಳನ್ನು ಒಳಗೊಂಡAತೆ ಪ್ರಸ್ತುತ ಪಡಿಸಿದ್ದಾರೆ. ಅತ್ಯಂತ ಜನಪ್ರಿಯ ಬ್ಯಾಲೆ ಪ್ರೀಮ್ ರಾಗಿಣಿ-ದೇವರ ಪ್ರೀತಿಯ ಕುರಿತು ಮೆಲೊಡಿ ಆಫ್ ಲವ್-ಭಾರತ ಮತ್ತು ವಿದೇಶಗಳಲ್ಲಿ ೪೦೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ.

ಉನ್ನತ ಸಾಮರ್ಥ್ಯದ ಅಪರೂಪದ ನುರಿತ ಸಂಗೀತಗಾರನಾಗಿ, ಸಮರ್ಥ ಸಂಗೀತ ಮತ್ತು ನೃತ್ಯ ಶಿಕ್ಷಕರಾಗಿ ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತ ಮತ್ತು ನೃತ್ಯಗಳಲ್ಲಿ ಅವರ ಸಂಗೀತ ಮತ್ತು ನೃತ್ಯ ಕಾಲೇಜ್‌ನಲ್ಲಿ ಪಚಾರಿಕ ತರಬೇತಿ ನೀಡುತ್ತಿದ್ದರು. ಎಸ್‌ಎಎ ಸಂಗೀತ ಮತ್ತು ನೃತ್ಯದ ವಿವಿಧ ವಿಭಾಗಗಳಲ್ಲಿ ಪ್ರತಿವರ್ಷ ಸುಮಾರು ೧೦೦ ವಿದ್ಯಾಥಿüðಗಳಿಗೆ ತರಬೇತಿ ನೀಡಿ ವರ್ಷಂಪ್ರತಿಯೂ ೧೦೦% ಫಲಿತಾಂಶಕ್ಕೆ ಭಾಜನವಾಗಿದೆ. ಇದು ಫಾ| ಚಾರ್ಲ್್ಸ ಅವರ ಸೃಜನಶೀಲ ದೃಷ್ಟಿ ಮತ್ತು ಕಠಿಣ ಪರಿಶ್ರಮದ ಫಲ ಮತ್ತು ಅವರ ಶಿಕ್ಷಕರು ಮತ್ತು ವಿದ್ಯಾಥಿüðಗಳ ತಂಡದ ಸಮರ್ಪಣೆ ಮತ್ತು ಬದ್ಧತೆ ಮತ್ತು ಪ್ರದರ್ಶನ ಸದಸ್ಯರು ಮತ್ತು ಅವರ ಪೋಷಕರ ಫಲವಾಗಿದೆ. ಕಳೆದ ೪೦ ವರ್ಷಗಳಲ್ಲಿ ಸುಮಾರು ಒಂದುವರೆ ಸಾವಿರ ಯುವ ಕಲಾವಿದÀರು ಪೋರ್ಟಲ್‌ಗಳ ಮೂಲಕ ತಿಳಿದಿದ್ದಾರೆ ಮತ್ತು ಅವರೆಲ್ಲರೊಂದಿಗಿನ ಒಡನಾಟವನ್ನು ಪ್ರೀತಿಯಿಂದ ನೆನಪಿಸಿಕೊಂಡ ಫಾ| ಚಾರ್ಲ್್ಸ ವಾಸ್ ಇನ್ನು ನೆನಪು ಮಾತ್ರ.

By Suddi9

Leave a Reply

Your email address will not be published. Required fields are marked *