ಕಾರ್ಕಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ 73ನೇ ಸ್ಥಾಪನಾ‌ ದಿವಸ್ ರಾಷ್ಟ್ರೀಯ ವಿದ್ಯಾರ್ಥಿ ದಿನದ ಪ್ರಯುಕ್ತ ಸೇವಾಧರ್ಮ-2021 ರ 2ನೇ ಯೋಜನೆಯ ಪ್ರಕಾರದಲ್ಲಿ ಹಿರ್ಗಾನದ ಅಭಿನಂದನಾ ಗೋಶಾಲೆಗೆ ಎಬಿವಿಪಿಯ ಕಾರ್ಯಕರ್ತರು ಹಿಂಡಿಯನ್ನು ನೀಡಿದರು. ನಂತರ ವಿದ್ಯಾಭಾರತಿ ಸಂಯೋಜಿತ ಎಳ್ಳಾರೆ  ಜನಾರ್ದನ ಶಾಲೆಯಲ್ಲಿ ಧ್ವಜಾರೋಹಣ ಮಾಡಿ ಶಾಲಾ ವಠಾರದಲ್ಲಿ ಸ್ವಚ್ಛತಾ ಕಾರ್ಯ ಮತ್ತು ಗಿಡನೆಡುವ ಕಾರ್ಯವನ್ನು ನಡೆಸಿದರು.WhatsApp Image 2021-07-10 at 12.35.19 PMಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಸಂತೋಷ್ ಹೆಗ್ಡೆ, ದೇವೇಂದ್ರ ಕಾಮತ್, ಸುಕೇಶ್ ಹೆಗ್ಡೆ, ಗುರುಪ್ರಸಾದ್ ಕಿಣಿ, ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ರಾಘವೇಂದ್ರ ನಾಯಕ್ ಶಾಲಾ ಮುಖ್ಯೋಪಾಧ್ಯಾಯಿನಿ ಅಶ್ವಿನಿ ಹೆಗ್ಡೆ, ಎಬಿವಿಪಿಯ ಕಾರ್ಕಳ‌ ನಗರಾಧ್ಯಕ್ಷ ಅಭಿಷೇಕ್ ಸುವರ್ಣ, ಕಾರ್ಕಳ ತಾಲೂಕು ಸಂಚಾಲಕ ಯುಕೇಶ್.ಉಜಿರೆ, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಅಪರ್ಣಾ ಕಾರ್ಕಳ, ತಾಲೂಕು ಸಹಸಂಚಾಲಕ‌ ಕಾಬೆಟ್ಟು ಮನೀಶ್‌ ಕುಲಾಲ್, ನಗರಕಾರ್ಯದರ್ಶಿ ಮಂಜುಪ್ರಸಾದ್ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *