ಕಡ್ತಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಗ್ರಾಮ ವಿಕಾಸ ಸಮಿತಿ ಕಡ್ತಲ ಮಂಡಲ ಇದರ ವತಿಯಿಂದ ನನ್ನ ಗ್ರಾಮ ನನ್ನ ತೀರ್ಥ ಕ್ಷೇತ್ರ ಎನ್ನುವ ಪರಿಕಲ್ಪನೆಯಡಿ ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ 19 ರ ಸಂದರ್ಭದಲ್ಲಿ ಸಲ್ಲಿಸಿದ ಸೇವೆಗಾಗಿ ಧನ್ಯವಾದ ರೂಪಕವಾಗಿ ಪಡಿತರ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ವಿಕಾಸ ಸಮಿತಿ ಉಡುಪಿ ಜಿಲ್ಲಾ ಸಂಯೋಜಕರಾದ ಶ್ರೀಯುತ ಪ್ರಮೋದ್ ಶೆಟ್ಟಿ ಮಂದಾರ್ತಿ ,ವಿದ್ಯಾ ಭಾರತಿ ಉಡುಪಿ ಜಿಲ್ಲೆಯ ಉಪಾಧ್ಯಕ್ಷರಾದ ಶ್ರೀಮತಿ ಪ್ರಿಯ ಯೋಗಿಶ ಮಲ್ಯ ಕಡ್ತಲ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಕಳ ತಾಲೂಕು ಕಾರ್ಯವಾಹ ಮಂಜುನಾಥ ಶಿವಪುರ,ದೊಂಡೇರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ದ ಆರೋಗ್ಯ ಅಧಿಕಾರಿ ಚಂದ್ರಿಕಾ ಕಿಣಿ ಶ್ರೀ ಜನಾರ್ದನ ಎಜ್ಯುಕೇಶನ್ ಟ್ರಸ್ಟ್( ರಿ) ಎಳ್ಳಾರೆ ಇದರ ಅಧ್ಯಕ್ಷರಾದ ಶ್ರೀಯುತ ದಿನೇಶ್ ಕಿಣಿ ಎಳ್ಳಾರೆ,ಕಾರ್ಕಳ ತಾಲೂಕು ಗ್ರಾಮ ವಿಕಾಸ ಸಮಿತಿ ಸಂಯೋಜಕರಾದ ಗುರುಪ್ರಸಾದ್ ಕಿಣಿ ದೊಂಡೇರಂಗಡಿ ಹಾಗೂ ಗ್ರಾಮ ವಿಕಾಸ ಸಮಿತಿ ಕಡ್ತಲ ಮಂಡಲದ ಸದಸ್ಯರಾದ ಎಸ್.ರಾಘವೇಂದ್ರ ನಾಯಕ್,ನಾರಾಯಣ ಕಿಣಿ,ನವೀನ್ ಭಟ್ ಚಂದ್ರಕಾಂತ್ ಹೆಗ್ಡೆ, ಅಶೋಕ್ ನಾಯ್ಕ, ಲಿಂಗರಬೆಟ್ಟು ಸುರೇಶ ನಾಯಕ್,ಮಂಜುನಾಥ್ ಸಿರಿಬೈಲು,ದೀಪಕ್ ಕಾಮತ್ ಉಪಸ್ಥಿತರಿದ್ದರು
