ಕಾರ್ಕಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕು ಇದರ ವತಿಯಿಂದ ಆನೆಕೆರೆಯ ಅಮರ್ ಜವಾನ್ ಸ್ಮಾರಕದ ಬಳಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಿವೃತ್ತ ಸೇನಾನಿಗಳಾದ ಗಿಲ್ಬರ್ಟ್ ಬ್ರಿಗಾಂಝ, ಹಾಗೂ ರಮೇಶ್ ಕಾರ್ಣಿಕ್ ರವರು ಮಾತನಾಡಿ ಕಾರ್ಗಿಲ್‌ನ ಬಲಿದಾನಿಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಸಂಘದ ಹಿರಿಯರು ಹಾಗೂ ವಿದ್ಯಾರ್ಥಿ ಪರಿಷತ್‌ನ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್.ಕೋರಿ ಹಾಗೂ ವಿದ್ಯಾರ್ಥಿ ಪರಿಷತ್‌ನ ಕಾರ್ಯಕರ್ತರು ಉಪಸ್ಥಿತರಿದ್ದರು
