ಕಾರ್ಕಳ: ಕಡ್ತಲ ಗ್ರಾಮ ಪಂಚಾಯತ್ ನ ಕೋವಿಡ್ ಕಾರ್ಯಪಡೆ ಸದಸ್ಯರಿಗೆ ಯುವಜನ ಫಾರ್ ಸೇವಾ ಕಾರ್ಕಳ ಇವರು ಫೇಸ್ ಶೀಲ್ಡನ್ನು ವಿತರಣೆ ಮಾಡಿದರು.
ಕಡ್ತಲ ಗ್ರಾ.ಪಂನ ಕೋವಿಡ್ ನಿರ್ವಹಣೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿ ಮಾತನಾಡಿದ ಸಂಸ್ಥೆಯ ರಮಿತಾ ಶೈಲೇಂದ್ರ ರಾವ್ ಅವರು ಕೊರೋನಾ ವೈರಸ್ ಅನ್ನು ಎಲ್ಲರೂ ಒಂದಾಗಿ ಎದುರಿಸಬೇಕಾಗಿದೆ, ನಮ್ಮ ಆರೋಗ್ಯದ ಜವಾಬ್ದಾರಿ ನಮ್ಮ ಕೈಯ್ಯಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಕಡ್ತಲ ಗ್ರಾ.ಪಂನ ಅಧ್ಯಕ್ಷರಾದ ಮಾಲತಿ ದಿನೇಶ್ ಕುಲಾಲ್, ಉಪಾಧ್ಯಕ್ಷರು ಸತೀಶ್ ಪೂಜಾರಿ,ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೇರಂಗಡಿಯ ವೈದ್ಯಾಧಿಕಾರಿ ಡಾ.ಚಂದ್ರಿಕಾ ಕಿಣಿ, ಪಿಡಿಓ ಸುದರ್ಶನ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
