ಕೈಕಂಬ : ವಿಶ್ವ ಹಿಂದೂ ಪರಿಷತ್ ಬಜರಂಗದಳ ವಜ್ರಕಾಯ ಘಟಕ ಪಲ್ಲಿಪಾಡಿ ಇದರ ಆಶ್ರಯದಲ್ಲಿ ಸ್ಥಾಪಿಸಲಾದ `ಸಾಂತ್ವನ ಸೇವಾ ಯೋಜನೆ’ ಗ್ರೂಪ್‌ನಲ್ಲಿ ದಾನಿಗಳ ನೆರವಿಂದ ಸಂಗ್ರಹವಾದ ಸುಮಾರು ೩,೧೬,೭೪೭ ರೂಪಾಯಿಯನ್ನು ಎರಡು ಅಶಕ್ತ ಕುಟುಂಬಗಳಿಗೆ ಸಮಾನವಾಗಿ ವಿತರಿಸಲಾಯಿತು. ಅಪಘಾತದಲ್ಲಿ ಗಾಯಗೊಂಡಿರುವ ಕರಿಯಂಗಳ ಗ್ರಾಮದ ಭಂಡಾರಿಬೆಟ್ಟುವಿನ ಸಚಿನಾ ಮತ್ತು ಆಚಾರಿದೋಟದ ಗೀತಾ ಎಂಬವರ ಚಿಕಿತ್ಸೆಗಾಗಿ ಸೇವಾ ಯೋಜನೆಯಡಿ ಆರ್ಥಿಕ ನೆರವು ನೀಡಲಾಯಿತು.
ಇಬ್ಬರ ಮನೆಗೆ ತೆರಳಿ ಆರ್ಥಿಕ ನೆರವು ನೀಡಲಾದ ತಂಡದಲ್ಲಿ ತಾಪಂ ಸದಸ್ಯ ಯಶವಂತ ಕೋಟ್ಯಾನ್ ಪೊಳಲಿ, ತಾಪಂ ಮಾಜಿ ಸದಸ್ಯ ವೆಂಕಟೇಶ್ ನಾವಡ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಜಯಂತ ಮಣಿಕಂಠಪುರ, ಪಂಚಾಯತ್‌ನ ಮಾಜಿ ಸದಸ್ಯ ಕಿಶೋರ್ ಪಲ್ಲಿಪಾಡಿ, ವಿಹಿಂಪ ವಜ್ರಕಾಯ ಘಟಕದ ಅಧ್ಯಕ್ಷ ಚಂದ್ರಶೇಖರ, ಬಜರಂಗದಳ ಸಂಯೋಜಕ ಪ್ರೇಮನಾಥ, ಲೋಕೇಶ್, ಜಿತೇಶ್, ಗಣೇಶ್ ದೋಟ, ರಾಕೇಶ್ ಆಚಾರಿದೋಟ, ಅಶೋಕ್ ಬಡಕಬೈಲು, ವಸಂತ ಕರಿಯಂಗಳ, ಲಕ್ಷ ಮತ್ತಿತರರು ಇದ್ದರು.
