ಕೈಕಂಬ : ಮಠದಗುಡ್ಡೆ ಪರಿಶಿಷ್ಠ ಪಂಗಡ(ಎಸ್‌ಟಿ) ಕಾಲೋನಿಗೆ ಹತ್ತಿರದ ಒಳರಸ್ತೆಯ ಗುಡ್ಡದ ಜರ್ಜರಿತ ಪ್ರದೇಶದಲ್ಲಿ ಚರಂಡಿ ಹಾಗೂ ತಡೆಗೋಡೆ ನಿರ್ಮಾಣ ಕಾರ್ಯ ತೀವ್ರಗತಿಯಲ್ಲಿ ಮುಂದುವರಿದಿದೆ. ಒಂದು ತಿಂಗಳ ಹಿಂದೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಈ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿದ್ದರು.
ಶಾಸಕರ ನಿಧಿಯಿಂದ ೬ ಲಕ್ಷ ರೂ ಅನುದಾನದಿಂದ ಈ ಕಾಮಗಾರಿ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ, ಮಳೆಗಾಲಕ್ಕೆ ಮುಂಚೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕರು ಗುತ್ತಿಗೆದಾರರಿಗೆ ಸೂಚಿಸಿದ್ದಾರೆ ಎಂದು ಗುರುಪುರ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಸುವರ್ಣ ತಿಳಿಸಿದರು
