ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಶ್ವಗುಬ್ಬಚ್ಚಿ ದಿನಾಚರಣೆಯ ಅಂಗವಾಗಿ ಮನೆ ಮನೆಯಲ್ಲೂ ಪಕ್ಷಿಗಳಿಗೆ ನೀರಿಡುವಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಮನೆಯಂಗಳದಲ್ಲಿರುವ ಹಾಗೂ ಇನ್ನಿತರ ಪಕ್ಷಿಗಳ ಬಗೆಗೆ ಜನಜಾಗೃತಿಉಂಟುಮಾಡಿ ಅವುಗಳ ಸಂಕಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪಯತ್ನವಾಗಿ ಮಾರ್ಚ್ ೨೦ ರಂದುವಿಶ್ವ ಗುಬ್ಬಚ್ಚಿಗಳ ದಿನಾಚರಣೆಯನ್ನುಆಚರಿಸಲಾಗುತ್ತದೆ.

“ರಾಮಾಯಣಕಾಲದಲ್ಲಿ ಪಕ್ಷಿಗಳೂ ಧರ್ಮ ಸಂಸ್ಥಾಪನೆಗೆ ಹೋರಾಟ ನಡೆಸಿರುತ್ತದೆ. ಇತಿಹಾಸ ಕಾಲದಿಂದ ಅಂಚೆ ಚೀಟಿ ಬಿಡುಗಡೆ ಆಗುವ ಮೊದಲು ಪಕ್ಷಿಗಳೇ ಸಂದೇಶವಾಹಕಗಳಾಗಿದ್ದವು. ಮಹಾರಾಷ್ಡ್ರದ ಲಾಪೋಡಿಯ ಎಂಬ ಗ್ರಾಮದಲ್ಲಿ ಇವತ್ತಿಗೂ ಪಕ್ಷಿಗಳಿಗೆ ಕಲ್ಲು ಹೊಡೆಯುವುದು ಅಪರಾಧವಾಗಿದೆ.ಮನುಷ್ಯ ಮತ್ತು ಪಕ್ಷಿಗಳಿಗೆ ನೈಸರ್ಗಿಕವಾದ ಅವಿನಾಭಾವ ಸಂಬಂಧವಿದೆ.ಪ್ರಾಕೃತಿಕ ಸಮತೋಲನ ಸಾಧಿಸಲು ಮತ್ತು ಭೂಮಿಯ ಮೇಲೆ ವೃಕ್ಷ ಸಂಪತ್ತನ್ನು ಉಳಿಸಿ ಬೆಳೆಸುವ ಮಹತ್ತರವಾದ ಕೆಲಸವನ್ನು ಪಕ್ಷಿಗಳು ನೀಡುತ್ತಿದೆ.ಬದಲಾದಕಾಲಘಟ್ಟದಲ್ಲಿ ಪಕ್ಷಿಗಳ ಜೀವ ಸಂಕುಲ ಹಾಗೂ ವಾಸಸ್ಥಾನ ಅಳಿವಿನಂಚಿನಲ್ಲಿದೆ. ತಾಂತ್ರಿಕ ಬದುಕಿಗೆಜೋತು ಬಿದ್ದು, ಕೃಷಿಯಲ್ಲಿ ಕೀಟನಾಶಕ ಉಪಯೋಗಿಸಿ, ಪ್ಯಾಕೇಟ್ ಆಹಾರಗಳ ಬಳಕೆ ಮತ್ತು ಆವಾಸಗಳ ಕೊರತೆಯಿಂದ ಪಕ್ಷಿ ಸಂಕುಲ ನಾಶವಾಗುತ್ತದೆ.ಅತಿಯಾದತಾಪಾಮಾನ ಏರಿಕೆಯಿಂದ, ನೀರಿನಕೊರತೆಯನ್ನು ನೀಗಿಸಲು ಗೆರಟೆಯ ಮೂಲಕ ಮನೆಮನೆಗಳಲ್ಲಿ ಪಕ್ಷಿಗಳಿಗೆ ನೀರು ಇಡುವ ಕೆಲಸ ಮಾಡಿ” ಎಂದುಅಧ್ಯಾಪಕರಾದ ಸುಮಂತ್ ಆಳ್ವ ಮಕ್ಕಳಿಗೆ ಕರೆ ನೀಡಿದರು. 
ಭಾರತ ಸಂಚಾರ ನಿಗಮದ ನಿವೃತ್ತ ಉದ್ಯೋಗಿ ಪಿ.ಕೆ.ಪದ್ಮನಾಭ ಇವರು ಮಣ್ಣಿನ ಪಾತ್ರೆಗೆ ಕಲಶದಿಂದ ನೀರು ಹಾಕುವ ಮೂಲಕ ಪಕ್ಷಿಗಳಿಗೆ ನೀರಿಡುವಅಭಿಯಾನವನ್ನುಉದ್ಘಾಟಿಸಲಾಯಿತು. ಶ್ರೀರಾಮ ಶಾಲೆಯ ಸಾವಿರ ವಿದ್ಯಾರ್ಥಿಗಳು ತಮ್ಮತಮ್ಮ ಮನೆಗಳಲ್ಲಿ ಪೋಷಕರೊಂದಿಗೆ ಪಕ್ಷಿಗಳಿಗೆ ನೀರಿಡುವ ಪ್ರತಿಜ್ಞೆಯನ್ನು ಮಾಡಿದರು. ವಿಜ್ಞಾನ ಸಂಘದ ನಿರ್ದೇಶಕರಾದರಾಜೇಶ್ವರಿಯವರುಕಾರ್ಯಕ್ರಮವನ್ನು ನಿರೂಪಿಸಿದರು.
೬ನೇ ತರಗತಿಯ ವಿದ್ಯಾರ್ಥಿನಿಯರು ಗುಬ್ಬಚ್ಚಿಗೀತೆ ಹಾಡಿದರು.ತಬಲದಲ್ಲಿ ೭ನೇ ತರಗತಿಯದುರ್ಗಾಶರಣ್ ಸಹಕರಿಸಿದನು. ಶಾಲೆಯ ಸುತ್ತಮುತ್ತಲಿರುವ ಮರಗಳಿಗೆ ಅಧ್ಯಾಪಕರು ಹಾಗೂ ವಿದ್ಯಾರ್ಥಿವೃಂದದವರುಗೆರಟೆಯಲ್ಲಿ ನೀರು ತುಂಬಿಸಿ ನೇತು ಹಾಕಿದರು. ವಿದ್ಯಾರ್ಥಿ ನಾಯಕನಾದ ಗಗನ್, “ಈ ಕಾರ್ಯಕ್ರಮದಿಂದ ಪಕ್ಷಿಗಳ ಮೇಲಿನ ಕಾಳಜಿ ಹೆಚ್ಚಾಯಿತು ಮತ್ತು ಮನೆಯಲ್ಲಿಯೂ ಇಂತಹ ಕಾರ್ಯವನ್ನು ಪೋಷಕರೊಂದಿಗೆ ಸೇರಿ ಮುಂದುವರಿಸಬೇಕೆಂಬ ಆಸಕ್ತಿ ಮೂಡಿತು.” ತನ್ನ ಅಭಿಪ್ರಾಯವನ್ನು ಹೇಳಿದನು.
