ದೊಂಡೇರಂಗಡಿ :ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಸಂಘ ದೊಂಡೇರಂಗಡಿ ಕುಕ್ಕುಜೆ ಇದರ 13ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮವು ಕಡ್ತಲ ಗ್ರಾ. ಪಂ ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಮುಳ್ಕಾಡು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟನೆಗೈದು ಮಾತನಾಡಿದ ಉದ್ಯಮಿ ವಿಶ್ವನಾಥ್ ಪೂಜಾರಿ ಕಡ್ತಲ ಯಕ್ಷಗಾನ ಸಂಘದ ಕಲಾ ಚಟುವಟಿಕೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳಾದ ಶಂಕರ್ ನಾಯಕ್ ಎಳ್ಳಾರೆ ಹಾಗೂ ಹಿರಿಯ ಕಮ್ಮಾರರಾದ ಭಾಸ್ಕರ ಆಚಾರ್ಯ ದೊಂಡೇರಂಗಡಿ ಇವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಪ್ರಸಂಗಕರ್ತರಾದ ಮಂಜುನಾಥ್ ರಾವ್ ಹಾವಂಜೆ,ಸಂಘದ ಗುರುಗಳಾದ ಉದಯ್ ಕುಮಾರ್ ಮುದ್ರಾಡಿ, ಕಡ್ತಲ ಗ್ರಾ.ಪಂ ಸದಸ್ಯರಾದ ಅರವಿಂದ ಹೆಗ್ಡೆ,ಶೇಖರ್ ಇಸರ್ ಮಾರ್, ರಾಘವ ನಾಯ್ಕ್, ಯಕ್ಷಗಾನ ಸಂಘದ ಗೌರವಾಧ್ಯಕ್ಷರಾದ ದಿನೇಶ್ ಶೆಟ್ಟಿ,ಅಧ್ಯಕ್ಷರಾದ ಹರೀಶ್ ದುಗ್ಗನ್ ಬೆಟ್ಟು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ವಿಜಯ್ ಹೆಗ್ಡೆ ಸ್ವಾಗತಿಸಿ,ಕಾರ್ಯದರ್ಶಿ ದೀಪಕ್ ಕಾಮತ್ ಎಳ್ಳಾರೆ ವಾರ್ಷಿಕ ವರದಿ ಮಂಡಿಸಿದರು.ದೈಹಿಕ ಶಿಕ್ಷಕರಾದ ಶಂಕರ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
