ಬೆಳ್ಳೂರು: ಕೊಳತ್ತಮಜಲು ಬ್ರಹ್ಮಶ್ರೀ ನಾರಾಯಣಗುರುಮಂದಿರದಲ್ಲಿ ಬಿಲ್ಲವ ಸಮಾಜ ಪಂಚ ಗ್ರಾಮದ ಸಾಮಾನ್ಯ ಸಭೆಯು ಭಾನುವಾರ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗಂಗಾಧರ ಪೂಜಾರಿ ವಹಿಸಿದ್ದರು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜಯಶಾಲಿಯಾದ ಪಂಚಗ್ರಾಮದ ಬಿಲ್ಲವ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

panchagramaಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಗೊಂಡ ದೇವಪ್ಪ ಪೂಜಾರಿ ಬಾಳಿಕೆ ಇವರನ್ನು ಕೂಡ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಂಚ ಗ್ರಾಮದ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ಅಧ್ಯಕ್ಷರು ಗ್ರಾಮ ಸಮಿತಿಗಳ ಅಧ್ಯಕ್ಷರು ಹಾಗೂ ಸಮಾಜದ ಸದಸ್ಯರು ಹಾಜರಿದ್ದರು.

By Suddi9

Leave a Reply

Your email address will not be published. Required fields are marked *