ಕೈಕಂಬ: ಗುರುಪುರ ಗ್ರಾಮ ಪಂಚಾಯತ್‌ನ ಮೂಳೂರು ಗ್ರಾಮ ವ್ಯಾಪ್ತಿಯ ಮಠದಗುಡ್ಡೆ ಬಳಿ ಪರಿಶಿಷ್ಟ ಜಾತಿ(ಎಸ್‌ಸಿ) ಕಾಲೊನಿಯಲ್ಲಿ ಲೋಕೋಪಯೋಗಿ ಇಲಾಖೆಯ ೬ ಲಕ್ಷ ರೂ ಅನುದಾನದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಬುಧವಾರ ಭೂಮಿಪೂಜೆ ನಡೆಸಿದರು.gur-mar-3-bhumipooje-2

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಹರೀಶ್ ಬಳ್ಳಿ, ಸುನಿಲ್ ಕುಮಾರ್, ಮಾಜಿ ಸದಸ್ಯರಾದ ಸೇಸಮ್ಮ, ಶೋಭಾ ಡಿ, ಸಾದಿಕ್ ಹಾಗೂ ಬಿಜೆಪಿ ಪ್ರಮುಖರಾದ ಸೋಮಯ್ಯ, ಪುರಂದರ ಮಲ್ಲಿ, ವಿನಯ ಸುವರ್ಣ, ಶ್ರೀಮತಿ, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *