ಕುಪ್ಪೆಪದವು: ಇರುವೈಲು ಶ್ರೀ ದರ‍್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ‍್ಮಿಕ ಸಭೆ ಮತ್ತು ಸನ್ಮಾನ ಕಾರ‍್ಯಕ್ರಮ ದೇವಸ್ಥಾನದ ಸಭಾಭಾವನ ದಲ್ಲಿ ಸೋಮವಾರ ನಡೆಯಿತು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಐ. ಕುಮಾರ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.20210302_132833

ಧಾರ್ಮಿಕ ಉಪನ್ಯಾಸ ನೀಡಿದ ವಿಶ್ವಹಿಂದೂ ಪರಿಷತ್ ಮಂಗಳೂರು ಪ್ರಾಂತೀಯ ಸಹಕಾರ‍್ಯ ಕೃಷ್ಣಮೂರ್ತಿ  ಅವರು ದೇವರಲ್ಲಿ ಅಚಲವಾದ ನಂಬಿಕೆ ಭಕ್ತಿ ಇದ್ದರೆ ಮಾತ್ರ ದೇವರ ಅನುಗ್ರಹ ಮಗೆ ಲಭಿಸುತ್ತದೆ, ಇಂದಿನ ನವಪೀಳಿಗೆಯ ಮಕ್ಕಳಲ್ಲಿ ನಮ್ಮ ರ‍್ಮದ ಆಚಾರ, ವಿಚಾರ, ನಂಬಿಕೆ, ನಡವಳಿಕೆಗಳ ಅರಿವಿನ ಕೊರತೆ ಇದೆ, ದೇವಾಲಯಗಳಲ್ಲಿ ಮಕ್ಕಳಿಗೆ ಧರ‍್ಮಿಕ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಾಡುವ ಅಗತ್ಯವಿದೆ ಈ ಬಗ್ಗೆ ವ್ಯವಸ್ಥಾಪನಾ ಸಮಿತಿಗಳು ಕಾರ‍್ಯೋನ್ಮುಖವಾಗಬೇಕು ಮತ್ತು ಧರ‍್ಮಿಕ ಪರಿಷತ್ ಸದಸ್ಯರು ಸರಕಾರದ ಗಮನ ಸೆಳೆಯಬೇಕು, ವಿಜ್ಞಾನ ಇತ್ತೀಚೆಗೆ ಕಂಡುಕೊಳ್ಳುವ ಸತ್ಯಗಳನ್ನು ಸಾವಿರಾರು ವರ‍್ಷಗಳ ಹಿಂದೆಯೇ ನಮ್ಮ ಋಷಿಮುನಿಗಳು ಸಾಬೀತು ಪಡಿಸಿದ್ದಾರೆ ಹಿಂದೂ ಧಾರ‍್ಮಿಕ ಆಚರಣೆಗಳ ಹಿಂದೆ ವೈಜ್ಞಾನಿಕ ಸತ್ಯ ಅಡಗಿದೆ ಆದರೆ ನಮ್ಮ ಆಚರಣೆಗಳನ್ನು ಮೂಢನಂಬಿಕೆ ಎಂದು ವಿಚಾರವಾದಿಗಳು ವಿರೋಧಿಸುತ್ತಿದ್ದಾರೆ ಎಂದರು.20210302_132700

ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ ಮಾತನಾಡಿ ಮನುಷ್ಯ ಜನ್ಮ ಶ್ರೇಷ್ಠವಾದ ಜನ್ಮ ಆದರೆ ನಮ್ಮ ಶ್ರೇಷ್ಠತೆಯನ್ನು ಮರೆತು ವ್ಯವಹಾರ ಮಾಡಿದಾಗ ನಮ್ಮಲ್ಲಿ ರಾಕ್ಷಸ ಪ್ರವೃತ್ತಿ ಬೆಳೆದಾಗ ಸಮಾಜದಲ್ಲಿ ವಿಘಟನೆಗಳು ಪ್ರಾರಂಭವಾಗುತ್ತದೆ ಇದಕ್ಕೆ ಅವಕಾಶ ನೀಡದೆ ಸಮಾನತೆಗೆ, ಸಂಘಟನೆಗೆ, ಸಾಮರಸ್ಯದಿಂದ ಒಗ್ಗಟ್ಟಾಗಿ ಕೆಲಸ ಕಾರ‍್ಯಗಳನ್ನು ಮಾಡಿ ದೇವರನ್ನು ಆರಾಧಿಸಿದರೆ ಗ್ರಾಮ ಸುಭಿಕ್ಷವಾಗುತ್ತದೆ ಎಂದರು.

ಮೂಲ್ಕಿ-ಮೂಡಬಿದ್ರಿ ಶಾಸಕ ಉಮಾನಾಥ್ ಕೋಟ್ಯಾನ್, ಐ. ಕುಮಾರ್ ಶೆಟ್ಟಿ ಮುಂಬಯಿ ಉದ್ಯಮಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಕುಸುಮೋಧರ ಡಿ. ಶೆಟ್ಟಿ, ಕ್ಷೇತ್ರದ ಆಡಳಿತಾಧಿಕಾರಿ ಶ್ರೀಮತಿ ಇಂದು ಎಂ. ಸಭೆಯಲ್ಲಿ ಮಾತನಾಡಿದರು. ಮೂಡಬಿದ್ರೆ ಚೌಟರ ಅರಮನೆಯ ಕುಲದೀಪ ಚೌಟ, ಜಿಲ್ಲಾ ಧರ‍್ಮಿಕ ಪರಿಷತ್ ಸದಸ್ಯರುಗಳಾದ ಸಂಜೀವ ಸೂಟರ್ ಪೇಟೆ, ಗಿರಿಪ್ರಕಾಶ್ ತಂತ್ರಿ,ವಿಹೆಚ್ ಪಿ ಮಂಗಳೂರು ವಿಭಾಗದ ಅಧ್ಯಕ್ಷ ಗೋಪಾಲ್ ಕುತ್ತಾರ್, ಬರ‍್ದಿಲ ಸಾಂಬಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೋಮಶೇಖರ್ ಶೆಟ್ಟಿ, ಇರುವೈಲು ಗ್ರಾಮ ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ನ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿಯ ಎಲ್ಲಾ ಸದಸ್ಯರು, ಊರಿನ ಹಿರಿಯರು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಆಡಳಿತಾಧಿಕಾರಿ ಶ್ರೀಮತಿ ಇಂದು ಅವರನ್ನು ಶಾಲು ಹೊದೆಸಿ ಫಲಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ವಿನ್ಯಾಸ್ ಮತ್ತು ನಿಧಿಶಾ ಇವರುಗಳಿಗೆ ವಿದ್ಯಾನಿಧಿ ಮತ್ತು ರುಕ್ಮಿಣಿ ದಾಸ್ ಅವರಿಗೆ ಆರೋಗ್ಯ ನಿಧಿಯನ್ನು ವಿತರಿಸಲಾಯಿತು. ಕ್ಷೇತ್ರದಲ್ಲಿ ವರ‍್ಷವಿಡೀ ನಡೆಯುವ ಕಾರ‍್ಯಕ್ರಮಗಳ ಕ್ಯಾಲೆಂಡರ್ ಅನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.ಕು|ಪ್ರಸ್ತುತಿ ಪ್ರರ‍್ಥನೆ ನೆರವೇರಿಸಿದರು, ಸತೀಶ್ ಪೂಜಾರಿ ತಂಗಿಲ ಸ್ವಾಗತಿಸಿ, ಹೈಕೋರ್ಟ್  ವಕೀಲ ಐ.ಸಿ. ಶೆಟ್ಟಿ ವಂದಿಸಿದರು ದಿನೇಶ್ ರಾಯಿ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *