ಬಹೆರೆನ್: ಯಹೂದಿಗಳನ್ನು ಕ್ರೂರ ರೀತಿಯಲ್ಲಿ ಕೊಂದು ಇಡೀ ವಿಶ್ವವನ್ನೇ ನಡುಗಿಸಿದ್ದ ಜಗತ್ತಿನ ಮಹಾನ್ ಕ್ರೂರಿ ತನ್ನ ಪೌರುಷವನ್ನು ವೃದ್ಧಿಸಲು ಎತ್ತಿನ ವೃಷಣದ ಸಾರ ಸೇವಿಸುತ್ತಿದ್ದ ಎಂಬ ವಿಚಾರ ಬಹಿರಂಗಗೊಂಡಿದೆ.
ಹೊಟ್ಟೆ ನೋವು, ನಿದ್ರಾಹೀನತೆಯಿಂದ ಸದಾ ಬಳಲುತ್ತಿದ್ದ ನಾಜಿ ನಾಯಕ ಮಾನಸಿಕ ಗೊಂದಲಗಳಿಂದ ತೊಳಲಾಡುತ್ತಿದ್ದ. ಭಯದಿಂದ ನಡುಗುತ್ತಿದ್ದ ಎಂಬ ಸಂಗತಿಯೂ ಬಹಿರಂಗವಾಗಿದೆ.

hitlar
ಬ್ರಿಟಿಷ್ ವಾಹಿನಿಯೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮ ಹಿಟ್ಲರ್ ಜೀವನವನ್ನು ವಿಭಿನ್ನವಾಗಿ ಚಿತ್ರಿಸಿದೆ. ರಹಸ್ಯವಾಗಿದ್ದ ಆತನ ಮಾದಕ ದೃವ್ಯ ಸೇವನೆ ಚಟವೂ ಬಹಿರಂಗವಾಗಿದೆ. ಅಮೆರಿಕದ ಸೇನಾ ಕಡತವೊಂದರ ದಾಖಲೆ ಆಧರಿಸಿ ಡಾಕ್ಯುಮೆಂಟರಿ ಸಿದ್ಧಮಾಡಲಾಗಿದೆ. 74 ಬಗೆಯ ಮಾದಕ ದ್ರವ್ಯಗಳನ್ನು ಸೇರಿಸಿದ್ದ ಪಾನೀಯವೊಂದನ್ನು ನಾಜಿ ನಾಯಕ ಸೇವಿಸುತ್ತಿದ್ದ ಎಂದು ಹೇಳಿದೆ
ಹಿಟ್ಲರ್ ಸೇವಿಸುತ್ತಿದ್ದ ಮಾದಕ ದೃವ್ಯ ಇವತ್ತಿನ ‘ಕ್ರಸ್ಟಲ್ ಮೆಂಥ್’ಗೆ ಹೋಲಿಕೆಯಾಗುತ್ತಿತ್ತು. ಯುದ್ದ ಕಾಲದಲ್ಲಿ ಸೈನಿಕರಿಗೆ ಆರೈಕೆ ಮಾಡಲು ಬಳಸುತ್ತಿದ್ದ ಔಷಧಗಳ ಬೇರೆ ರೂಪವೇ ಹಿಟ್ಲರ್ ಗೆ ಅಮಲು ಪದಾರ್ಥವಾಗಿತ್ತು. ಜರ್ಮನಿಯಲ್ಲಿಯೇ ಸಂಗ್ರಹಣೆ ಮಾಡಿರುತ್ತಿದ್ದ ಔಷಧಗಳನ್ನು ಹಿಟ್ಲರ್ ತನ್ನ ವ್ಯಸನಕ್ಕೂ ಬಳಸಿಕೊಳ್ಳುತ್ತಿದ್ದ. ಹಿಟ್ಲರ್ ನ ಅನಧಿಕೃತ ವೈದ್ಯ ಥಿಯೋಡರ್ ಮಾರ್ ವೆಲ್ ಮಾದಕ ದ್ರವ್ಯ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದ ಎಂದು ಸೇನಾ ಇಲಾಖೆಯ ಕಡತಗಳು ಹೇಳಿವೆ.
ಹಿಟ್ಲರ್ ಯುದ್ಧ ನಡೆಯುತ್ತಿದ್ದ ಜಾಗಕ್ಕೆ ಪತ್ರ ಬರೆದು ತನಗೆ ಬೇಕಾದ ಔಷಧ(ಮಾದಕ ವಸ್ತು) ಕಳಿಸಿಕೊಡುವಂತೆ ಕೇಳುತ್ತಿದ್ದ. ಕಳಿಸದಿದ್ದರೆ ನಾನು ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿ ಎನ್ನುತ್ತಿದ್ದ ಎಂದು ಜರ್ಮನಿಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಹಿತ್ಯಕ್ಕೆ ನೊಬೆಲ್ ಪಡೆದ ಮಾಜಿ ಸೈನಿಕ ಹೇನ್ರಿಚ್ ಬೌಲ್ ಹೇಳಿದ್ದಾರೆ.

By suddi9

Leave a Reply

Your email address will not be published. Required fields are marked *