ಜಮ್ಮು-ಕಾಶ್ಮೀರ: ಬಿಎಸ್ಎಫ್ ಶಿಬಿರ ಗುರಿಯಾಗಿಸಿಕೊಂಡ ಉಗ್ರರು ನೆಲ ಬಾಂಬ್ ಸ್ಫೋಟಿಸಿರುವ ಘಟನೆ ಗುರುವಾರ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.
ಬಾರಾಮುಲ್ಲಾ-ಕುಪ್ವಾರಾ ಹೆದ್ದಾರಿಯ ರಫೀದಾಬಾದ್ನಲ್ಲಿ ಉಗ್ರರು ನೆಲಬಾಂಬ್ ಸ್ಫೋಟಿಸಿದ್ದಾರೆ. ಹಲವು ಸೈನಿಕರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.

ಗಾಯಾಳು ಸೈನಿಕರಿಗೆ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
