ಕ್ಯಾಲಿಫೋನರ್ಿಯಾ: ಹಲವಾರು ಊಹಾಪೋಹ ಮತ್ತು ಕಥೆಗಳಿಗೆ ಎಡೆಮಾಡಿಕೊಟ್ಟ ಅಮೆರಿಕದ ಎಕ್ಸ್-37ಬಿ ವಿಮಾನ ಎರಡು ವರ್ಷಗಳ ಕಾಲ ಭೂಮಿಯನ್ನ ಸುತ್ತಾಡಿ ನಿನ್ನೆ ಅಮೆರಿಕಕ್ಕೆ ಹಿಂದಿರುಗಿದೆ. ಅಮೆರಿಕದ ಈ ಗುಪ್ತಚರ ವಿಮಾನ 674 ದಿನಗಳ ಕಾಲ ರಹಸ್ಯ ಕಾಯರ್ಾಚರಣೆ ನಡೆಸಿತ್ತು. ಆದರೆ, ಯಾವ ರಹಸ್ಯ ಕಾಯರ್ಾಚರಣೆ ನಡೆಸಿತು ಎಂಬ ವಿವರ ಮಾತ್ರ ರಹಸ್ಯವಾಗೇ ಇದೆ.
vimana

ಎಕ್ಸ್-37ಬಿ ಇದು ಮೂರನೇ ಬಾರಿ ಇಂಥ ರಹಸ್ಯ ಕಾಯರ್ಾಚರಣೆಗೆ ತೊಡಗಿಕೊಂಡಿದ್ದು. 1999ರಲ್ಲೇ ಮೊದಲ ಬಾರಿ ಕಾಯರ್ಾಚರಣೆ ನಡೆದಿತ್ತು. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಸೀಕ್ರೆಟ್ ಮಿಷನ್’ಗಳಂತೆ ಅನೇಕ ಗುಪ್ತ ಕಾಯರ್ಾಚರಣೆಗಳು ನಡೆಯುತ್ತವೆ ಎಂಬ ಗಾಳಿಸುದ್ದಿಗಳು ಸಿಕ್ಕಾಪಟ್ಟೆ ಕೇಳಿಬರುತ್ತಿವೆ. ಚೀನಾ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಕಾರ್ಯಚಟುವಟಿಕೆಗಳ ಮೇಲೆ ಪ್ರಮುಖ ಮಾಹಿತಿ ಸಂಗ್ರಹಿಸಲು ಈ ಎಕ್ಸ್-37ಬಿ ವಿಮಾನವನ್ನ ಹಾರಿಬಿಡಲಾಗಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ

By suddi9

Leave a Reply

Your email address will not be published. Required fields are marked *