ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಷರ್ಾವದಿ ಜಾತ್ರಮಹೋತ್ಸವ ನಡೆಯತ್ತಿದ್ದು ಫೆ.16 ರಂದು ರಥೋತ್ಸವ ನಡೆಯಿತು. ರಥೋತ್ಸವ ಬಲಿ ಪಲ್ಲಕಿ ಉತ್ಸವ ಮಹಾಪೂಜೆ ಮತ್ತು ಶ್ರೀ ದುಗರ್ಾ ನೃತ್ಯಾಂಜಲಿ ಶಿವಾಜಿನಗರ ಬೆಂಜನಪದವು ಪ್ರಸ್ತುತ ಪಡಿಸುವ ಶ್ರೀ ಸುರೇಶ್ ಕಾರಂತ ಪೆರ್ಮಂಕಿ ನಿದರ್ೇಶನದಲ್ಲಿ ಭರತನಾಟ್ಯ ವೈಭವ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ಪ್ರಾಯೋಜಕರು ರೇಖಾ ವಸಂತ ಪೂಜಾರಿ ಕೊಳತ್ತಮಜಲು. ಫೆ 17 ಸೋಮವಾರ ಕವಟೋದ್ಘಾಟನೆ ಪಂಚಾಮ್ರತ ಆಬಿಷೇಕ, ತುಲಾಭಾರ ಸೇವೆ,ಚೂಣರ್ೋತ್ಸವ ಚಂದ್ರಮಂಡಲ ಮತ್ತು ದೇವರ ಓಕುಳಿ ಸ್ನಾನ ಸವಾರಿಯಲ್ಲಿ ಕಟ್ಟೆ ಪೂಜೆ ಧ್ವಜಾವರೋಹಣ , ಮಾಡ್ಲಯ ದೈವದ ನೇಮೋತ್ಸವ ನಡೆಯಲಿದೆ. ಕ್ಷೇತ್ರದ ತಂತ್ರಿಗಲಾದ ನಡ್ವಂತಾಡಿ ಬ್ರಹ್ಮಶ್ರೀ ವೇದಮೂತರ್ಿ ಉದಯ ಪಾಂಗಾಣ್ಣಾಯ ಇವರ ನೇತೃತ್ವದಲ್ಲಿ . ಪ್ರಧಾನ ಅರ್ಚಕ ಬಿ.ನರಸಿಂಹ ಭಟ್, ಆಡಳಿತ ಮೋಕ್ತೇಸರ ರಘು ಎಲ್ ಶೆಟ್ಟಿ , ಮೊಕ್ತೇಸರರು ಬಿ.ರಘುರಾಮ್ಭಟ್, ಕೆ.ಬಾರಿ ಭಂಡಾರಿ ,ಗೋಪಾಲಕೃಷ್ಣ ಪಿ.ಶೆಟ್ಟಿ , ಸಂತೋಷ್ ಕುಮಾರ್ ರೈ, ಗಂಗಾಧರ ಪೂಜಾರಿ ಕೊಪ್ಪಳ , ಸವಿತಾ ಎನ್ ಶೆಟ್ಟ ,ವೀಣಾ ಎಲ್ ಭಟ್ ಕೋಡಿ, ಶ್ರೀಮತಿ ಭಾಗಿಹಾಗೂ ಗುತ್ತಿನವರು ಮತ್ತು ಊರ ಹತ್ತು ಸಮಸ್ತರು ಪಾಲ್ಗೋಂಡಿದ್ದರು.






