ಉಳ್ಳಾಲ: ತೊಕ್ಕೊಟ್ಟು ಸಮೀಪದ ಕಾಫಿಕಾಡ್ ಶ್ರೀಸೋಮೇಶ್ವರೀ ಸೌಹಾರ್ಧ ಸಹಕಾರಿ ನಿಯಮಿತದ ಆಡಳಿತ ಮಂಡಳಿಯ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಉಮಾನಾಥ ನಾಯಕ್ ಉಳ್ಳಾಲ,  ಉಪಾಧ್ಯಕ್ಷರಾಗಿ ಧರ್ಮಪಾಲ್ ನಾಯಕ್ಪಂ ಪ್ವೆಲ್ ಅವರು ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ನಿಯಮಿತದ ಕಚೇರಿಯಲ್ಲಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ವಿಲಾಸ್ಅವರುಚುನಾವಣಾಧಿಕಾರಿಯಾಗಿ   ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

IMG-20200101-WA0109 (1)

ಈ ಸಂದರ್ಭ ನಿರ್ದೇಶಕರಾದ ಜೆ.ರವೀಂದ್ರ ನಾಯಕ್,ನರಸಿಂಹ ನಾಯಕ್ ಹರೇಕಳ,ರಂಜನ್ ಎಂ.ನಾಯಕ್,ಮುರಳೀಧರ ನಾಯಕ್ , ಮಿಥಿಲೇಶ್ ನಾಯಕ್ ಮಣ್ಣಗುಡ್ಡೆ,   ವೆಂಕಟೇಶ್ ಬಂಟ್ವಾಳ, ಎಸ್.ಯು. ಲಕ್ಷ್ಮಣ ನಾಯಕ್ ,ಆಶಾ ನಾಯಕ್ ಗೋರಿಗುಡ್ಡೆ, ಹೇಮಾ ಮಂಕಿಸ್ಟ್ಯಾಂಡ್ ಅವರು ಉಪಸ್ಥಿತರಿದ್ದರು.ಕಾರ್ಯದರ್ಶಿ ಲಾವಣ್ಯ ಗೋರಿಗುಡ್ಡೆ ಅವರು ಸ್ವಾಗತಿಸಿ,ವಂದಿಸಿದರು.ಸಿಬಂದಿ ಪವಿತ್ರ ಸಹಕರಿಸಿದರು. ನಿಯಮಿತಕ್ಕೆ ಎಲ್ಲಾ ನಿರ್ದೇಶಕರುಗಳು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದರು.

By suddi9

Leave a Reply

Your email address will not be published. Required fields are marked *