ಉಳ್ಳಾಲ: ಮುನ್ನೂರು ಗ್ರಾಮದ ಶ್ರೀ ಸೋಮೇಶ್ವರಿ ಸೌಹಾರ್ದ ಸಹಕಾರಿ ನಿಯಮಿತವು ೨೦೧೮-೧೯ ನೇ ಸಾಲಿನಲ್ಲಿ 3.32 ಕೋ.ರೂ.ವ್ಯವಹಾರ ಮಾಡಿ ,1.63 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ನಿಯಮಿತದ ಅಧ್ಯಕ್ಷ ಉಮಾನಾಥ ನಾಯಕ್ ಅವರು ತಿಳಿಸಿದ್ದಾರೆ. ತೊಕ್ಕೊಟ್ಟು ಸಮೀಪದ ಕಾಪಿಕಾಡ್ ನಲ್ಲಿರುವ ದೀಕ್ಷಾ ಮಿನಿಹಾಲ್ ನಲ್ಲಿ ಭಾನುವಾರ  ನಡೆದ ನಿಯಮಿತದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸದಸ್ಯರಿಗೆ ಶೇ.5 ಡಿವಿಡೆಂಟ್ ನ್ನು ಘೋಷಿಸಿದರು.
IMG-20190922-WA0045
ಸಂಘವು ಪ್ರಸ್ತುತ ಸಾಲಿಗೆ ‘ಎ’ ತರಗತಿ ಲಭಿಸಿದ್ದು, ನಿಯಮಿತವು ಅಸ್ತಿತ್ವಕ್ಕೆ ಬಂದು ಐದುವರ್ಷದಲ್ಲಿ ನಿವ್ವಳ ಲಾಭಗಳಿಸಿ,ಸದಸ್ಯರಿಗೆ ಡಿವಿಡೆಂಟ್ ನೀಡಲು ಶಕ್ತವಾಗವಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಙತೆ ಸಲ್ಲುಸಿದರಲ್ಲದೆ ಮುಂದಿನ ದಿನಗಳಲ್ಲಿ ಶಾಖೆಯೊಂದನ್ನು ತೆರೆಯುವ ಚಿಂತನೆ ಇದೆ ಎಂದರು.
IMG-20190922-WA0035
ಸಂಘದ ಉಪಾಧ್ಯಕ್ಷ ಧರ್ಮಪಾಲ್ ಪಂಪ್ ವೆಲ್,ನಿರ್ದೇಶಕರಾದ ಜೆ.ರವೀಂದ್ರ ನಾಯಕ್,ನರಸಿಂಹ ನಾಯಕ್,ರಂಜನ್ ಎಂ.ನಾಯಕ್,ಮುರಳೀಧರ ನಾಯಕ್,ದಯಾನಂದ ನಾಯಕ್,   ಮಿಥಿಲೇಶ್ ನಾಯಕ್ ಮಣ್ಣಗುಡ್ಡೆ,ರಾಮಚಂದ್ರ ಎನ್.ಜಿ.,ಹೇಮಾ ಮಂಕಿಸ್ಟ್ಯಾಂಡ್,ಆಶಾ ಗೋರಿಗುಡ್ಡೆ ರವರು ವೇದಿಕೆಯಲ್ಲಿದ್ದರು. ನಿಯಮಿತದ ಕಾರ್ಯದರ್ಶಿ ಲಾವಣ್ಯ ವರದಿ ವಾಚಿಸಿ,ಲೆಕ್ಕಪತ್ರ ಮಂಡಿಸಿದರು.ನಿರ್ದೇಶಕ ವೆಂಕಟೇಶ್ ಬಂಟ್ವಾಳ ವಂದಿಸಿದರು.ಸಿಬ್ಬಂದಿಗಳಾದ ಪವಿತ್ರ,ದಿವಾಕರ ಆಚಾರ್ಯ ಸಹಕರಿಸಿದರು.

By suddi9

Leave a Reply

Your email address will not be published. Required fields are marked *