Published On: Fri, Jan 3rd, 2020

ಶ್ರೀ ಕ್ಷೇತ್ರ ಸೋಮನಾಥ ಉಳಿಯಕ್ಕೆ ಅದಮಾರು ಮಠದ ಕಿರಿಯ ಶ್ರೀಗಳ ಭೇಟಿ

ಉಳ್ಳಾಲ: ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯೋತ್ಸವದಲ್ಲಿ ಪರ್ಯಾಯ ಪೀಠವನ್ನೇರಲಿರುವ ಅದಮಾರು ಮಠದ ಕಿರಿಯಶ್ರೀಗಳಾದ ಈಶಪ್ರಿಯತೀರ್ಥ ಪಾದಂಗಳವರು ಮಂಗಳೂರಿನ ಪೌರ ಸಮ್ಮಾನ ಸ್ವೀಕರಿಸುವ ಮುನ್ನ ತನ್ನ ಶಿಷ್ಯವೃಂದದ ಮಂಗಳೂರು ತಾ.ನ ಮುನ್ನೂರು ಗ್ರಾಮದ   “ಶ್ರೀ ಕ್ಷೇತ್ರ ಸೋಮನಾಥ ಉಳಿಯ”ಕ್ಕೆ ಗುರುವಾರ ಸಂಜೆ ಭೇಟಿ ನೀಡಿದರು.  ಶ್ರೀ ಅರಸುಧೂಮಾವತಿ ಬಂಟ ದೈವಸ್ಥಾನದ ಭಂಡಾರಮನೆಯ ಬಳಿ ಶ್ರೀಗಳನ್ನು ಸಾಂಪ್ರದಾಯಿಕವಾಗಿ ಸ್ಬಾಗತಿಸಿ ಬಳಿಕ ಪೂರ್ಣ ಕುಂಭದೊಂದಿಗೆ ಮರವಣಿಗೆಯ ಮೂಲಕ ಶ್ರೀ ಸೋಮೇಶ್ವರೀ ದೇವಳಕ್ಕೆ ಕರೆದುಕೊಂಡು ಹೋಗಲಾಯಿತು.
IMG-20200102-WA0069
ಇಲ್ಲಿ  ಶ್ರೀ ದೇವರ ದರ್ಶನ ಪಡೆದ ನಂತರ ಶ್ರೀಪಾದಂಗಳವರು ಶಿಷ್ಯವೃಂದಕ್ಕೆ ಆಶೀರ್ವಚನ ನೀಡಿ,ಪ್ರತಿನಿತ್ಯ  ದೇವರ ನಾಮಸ್ಮರಣೆಯಿಂದ ಜೀವನದಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ ಎಂದರು.ಮಕ್ಕಳಿಗೆ ಎಳವೆಯಲ್ಲೇ ನಮ್ನ ಆಚಾರ,ವಿಚಾರ,ಸಂಸ್ಕಾರದ ಜೊತೆಗೆ ಗುರು ಹಿರಿಯರನ್ನು ಗೌರವದಿಂದ ಕಾಣುವುದನ್ನು ಹೆತ್ತವರು ತಿಳಿಹೇಳಬೇಕು ಎಂದ ಶ್ರೀಗಳು ದ.ಕ.ದಲ್ಲಿಯೇ ಮಧ್ವಚಾರ್ಯರು ಜನಿಸಿರುವುದು ನಮ್ಮೆಲ್ಲರ ಪುಣ್ಯವಾಗಿದ್ದು,ಅವರ ತತ್ವ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
IMG-20200102-WA0070
ಶ್ರೀ ಅರಸು ಧೂಮಾವತಿ ಬಂಟ ದೈವಸ್ಥಾನದ ಮಧ್ಯಸ್ಥರಾದ ರಾಮ ಎಸ್.ನಾಯಕ್,ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯಕ್,ಪ್ರ.ಕಾರ್ಯದರ್ಶಿ ಯು.ದಯಾನಂದ ನಾಯಕ್,ಕೋಶಾಧಿಕಾರಿ ಧರ್ಮಪಾಲ್ ಪಂಪ್ ವೆಲ್, ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ,ಪ್ರ.ಕಾರ್ಯದರ್ಶಿ ಮುರಳೀಧರ ನಾಯಕ್,  ಶ್ರೀ ಸೋಮೇಶ್ವರೀ ಸೌ.ಸ.ನಿ.ದ ಅಧ್ಯಕ್ಷ ಉಮಾನಾಥ್ ನಾಯಕ್ ಉಳ್ಳಾಲ್,ಶ್ರೀ ಸೋಮೇಶ್ವರಿ ಮಹಿಳಾ  ಮಂಡಲದ ಅಧ್ಯಕ್ಷೆ ಕಸ್ತೂರಿ ಆರ್.ನಾಯಕ್, ಕಾರ್ಯದರ್ಶಿ ಮೋಹಿನಿ ಶೆಟ್ಟಿಬೆಟ್ಟು ,ಮಾಜಿ ಅಧ್ಯಕ್ಷೆ ಹೇಮಾ ಮಂಕಿಸ್ಟ್ಯಾಂಡ್,ಪ್ರಮುಖರಾದ ಸುಧೀರ್ ನಾಯಕ್ ಬಿಜೈ,ಯಶವಂತ ನಾಯಕ್,ಚಂದ್ರಶೇಖರ ನಾಯಕ್  ಬಪ್ಪಾಲ್,ಯೋಗೀಶ್ ಪಂಪ್ ವೆಲ್, ರಾಜೇಂದ್ರ ,ಶಾರದಾ,ರೇಣುಕಾ,ನಮಿತಾ,ಇಂದಿರಾ ಮೊದಲಾದವರಿದ್ದರು. ಸುಧಾಕರ ಪೇಜಾವರ ಮಂಗಳೂರು ಅವರು  ಈ ಸಂದರ್ಭ   ಶ್ರೀಗಳೊಂದಿಗಿದ್ದರು.
2 Attachments

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter