ಅಜೆಕಾರು: ಶಿಕ್ಷಣದ ಜೊತೆಗೆ ಶಿಸ್ತು ಅತೀ ಮುಖ್ಯವಾದುದು, ಶಿಸ್ತು ಭಾಗ್ಯದ ಬಾಗಿಲು ಎಂದು ನಿವೃತ್ತ ಮುಖ್ಯ ಶಿಕ್ಷಕ ಶಾಂತಿರಾಜ ಹೆಗ್ಡೆ ಅವರು ಹೇಳಿದರು. ಅವರು ಅಜೆಕಾರು ಸರಕಾರಿ ಹಿರಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 7 ನೇ “ತಿಂಗಳ ಸಂಭ್ರಮ” ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಯಾರದ್ದೋ ಸಂತೋಷಕ್ಕೆ ಹೋರಾಡುವ ಹುಂಜಗಳ ಕಾಳಗದ ಹಾಗೆ ಮನುಷ್ಯನ ಬದುಕು ಕೂಡಾ ವ್ಯರ್ಥವಾಗಬಾರದು ಎಂದು ಹಿರಿಯ ಕವಿ, ವ್ಯಾಪಾರೋದ್ಯಮಿ ಬಾಲಕೃಷ್ಣ ಹೆಗ್ಡೆ ಅವರು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು.
ತಿಂಗಳ ಕಾರ್ಯಕ್ರಮದ ಪ್ರಧಾನ ಆಕರ್ಷಣೆಯಾಗಿದ್ದು ಆಕರ್ಷಕ ಕಾರ್ಯಕ್ರಮ ನೀಡಿದ 4 ವರ್ಷದ ಬಾಲಕಿ ತನಿಷಾ ಎಚ್.ಜೆ ಕಾರ್ಕಳ ಮತ್ತು ಬೆಳುವಾಯಿ ಬ್ಲೋಸಮ್ ಶಾಲೆಯ 4 ನೇ ತರಗತಿಯ ಬಾಲಕಿ ಭರತನಾಟ್ಯದ ಭರವಸೆಯ ಪ್ರತಿಭೆ ಸ್ವಪ್ನ ಪಾಡ್ಯಾರ್ ಬನ್ನಡ್ಕ ಅವರನ್ನು ಸನ್ಮಾನಿಸಲಾಯಿತು.
ಅಂಗನವಾಡಿ ಬಾಲಕಿ ಸುನಿಜಾ ಅಜೆಕಾರು ಎರಡು ನೃತ್ಯ ಪ್ರದರ್ಶಿಸಿದರು. ಮತ್ತು ಶಾಲಾ ಮಕ್ಕಳು ಕಾರ್ಯಕ್ರಮ ನೀಡಿದರು. ಶಿಕ್ಷಕಿ ರವಿಕಲಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾ ಆಚಾರ್ಯ, ಗಿರಿಜಾ, ಪ್ರತಿಮಾ, ಹೊನ್ನಮ್ಮ ನಿಟ್ಟೆ, ಸಂಪ ಸದಾಶಿವ್, ಬೆಳದಿಂಗಳ ಸಮಿತಿಯ ಕಾರ್ಯದರ್ಶಿ ಸೌಮ್ಯಶ್ರೀ ಎಸ್ ಅಜೆಕಾರು ವೇದಿಕೆಯಲ್ಲಿದ್ದರು. ತಿಂಗಳ ಸಂಭ್ರಮ ಕಾರ್ಯಕ್ರಮದ ನಿರ್ದೇಶಕ, ಪತ್ರಕರ್ತ ಡಾ. ಶೇಖರ ಅಜೆಕಾರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
