ಕಾರ್ಕಳ : ಎಳ್ಳಾರೆ ಶ್ರೀಜನಾರ್ಧನ ಕಿರಿಯ ಪ್ರಾಥಮಿಕ ಶಾಲೆಗೆ ಖ್ಯಾತ ಶಿಕ್ಷಣ ತಜ್ಞ ಬಿ.ಆರ್. ಜಗದೀಶ್ ಭೇಟಿ ನೀಡಿದರು. ಶಾಲೆ ಪರಿಸರ ಹಾಗೂ ಶಾಲಾ ಚಟುವಟಿಕೆಗಳನ್ನು ಗಮನಿಸಿ ಶ್ಲಾಘನೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ನವ್ಯಚೇತನ ಟ್ರಸ್ಟ್ ಅಧ್ಯಕ್ಷ ಸದಾನಂದ ನಾಯಕ್, ಶ್ರೀಲಕ್ಷ್ಮೀಜನಾರ್ಧನ ಟ್ರಸ್ಟ್ ಅಧ್ಯಕ್ಷ ದಿನೇಶ್ ಕಿಣಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವೇಂದ್ರ ಕಾಮತ್ ಎಳ್ಳಾರೆ ಹಾಗೂ ಶಾಲಾ ಶಿಕ್ಷಕರು,ಗ್ರಾಮಸ್ಥರು ಉಪಸ್ಥಿತರಿದ್ದರು.





