ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಕಲ್ಲಡ್ಕ ಕೃಷಿ ಸಂಘದ ವಿದ್ಯಾರ್ಥಿಗಳಿಂದ ಭತ್ತದ ನಾಟಿಕಾರ್ಯಕ್ರಮ“ಮಣ್ಣ್‍ಡ್ ಪೊಂರ್ಬಿನಾಯೆ ನುಪ್ಪುತಿನುವೆ, ನರಮಾನಿಯಡ ಪೊಂರ್ಬಿನಾಯೆ ಮಣ್ಣ್‍ತಿನುವೆ” ಎಂಬ ತುಳು ಗಾದೆ ಮಾತಿನಂತೆ ನಮ್ಮ ಹಿರಿಯರುಜೀವನದ ಅವಿಭಾಜ್ಯ ಅಂಗವಾಗಿ ಮಣ್ಣನ್ನೇ ನಂಬಿ ಬದುಕಿದವರುಅರ್ಥಾತ್‍ಕೃಷಿಯನ್ನೇ ಅವಲಂಬಿಸಿದವರು. ಆದರೆಕೃಷಿಯಆಕರ್ಷಣೆಆಧುನಿಕತೆಯ ಭರಾಟೆಯಲ್ಲಿ ಮೂಲೆಗುಂಪಾಗಿರುವುದು ಸುಳ್ಳಲ್ಲ. ಇಂತಹಆಕರ್ಷಣೆ ವಿದ್ಯಾರ್ಥಿಗಳಲ್ಲಿಯೂ ಕಡಿಮೆಯಾಗಿರುವುದುಖೇದಕರ.ಇಂತಹಚಿಂತನೆ ಎಳವೆಯಲ್ಲೇ ಮೂಡಬೇಕೆನ್ನುವ ಸದಾಶಯದೊಂದಿಗೆಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಕೃಷಿ ಸಂಘದ ವಿದ್ಯಾರ್ಥಿಗಳು ಭತ್ತದ ನಾಟಿಕಾರ್ಯವನ್ನು ದಿನಾಂಕ 02/08/2019ರ ಶುಕ್ರವಾರದಂದು ಸುಧೇಕ್ಕಾರ್‍ನಲ್ಲಿರುವ 2 ಎಕರೆಗದ್ದೆಯಲ್ಲಿ ಮಾಡಿದರು.

DSC_0104
“ಶಿಕ್ಷಣವೆನ್ನುವುದು ಅಂಕಗಳಿಕೆಯ ಪರಮೊದ್ದೇಶವಾಗುವ ಈ ಕಾಲದಲ್ಲಿ ಕೃಷಿ ಮತ್ತು ಭತ್ತ ಬೆಳೆಯುವ ಹಂತಗಳನ್ನು ಕೇಳಿದಾಗಲೂ ಉತ್ತರ ಸಿಗುವುದು ಕಷ್ಟಸಾಧ್ಯ ಹೀಗೆಚಟುವಟಿಕಯೊಂದಿಗಿನ ಪ್ರಾಯೋಗಿಕ ಶಿಕ್ಷಣದಿಂದ ತಮ್ಮ ಮನೆ, ಕುಟುಂಬದ ಕೃಷಿ ಭೂಮಿಯರಕ್ಷಣೆಯೂ ಶಿಕ್ಷಿತರ ಆದ್ಯತೆಯಾಗಬೇಕೆನ್ನುವುದೇ ಸದುದ್ದೇಶವಾಗಿದೆ.ಈ ದೃಷ್ಟಿಯಿಂದ ಈ ನಾಟಿಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.”ಎಂದು ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಕಮಲಾ ಪ್ರಭಾಕರ್ ಭಟ್‍ತಿಳಿಸಿದರು

20190802_101116
ನಾಟಿಕಾರ್ಯಕ್ರಮವನ್ನು ಕೃಷಿ ಸಂಘದಅಧ್ಯಕ್ಷೆಯಾದಚೇತನಾಇವರಿಗೆಡಾ|| ಕಮಲಾ ಪ್ರಭಾಕರ್ ಭಟ್‍ತಲೆಗೆ ಮುಟ್ಟಾಲೆಇಡುವುದರ ಮೂಲಕ ಉದ್ಘಾಟಿಸಿದರು. ಹಾಗೆಯೇ ಸಹಸಂಚಾಲಕರಾದರಮೇಶ್ ಶ್ರೀಮಾನ್‍ರವರು ಗದ್ದೆಗೆತಾಂಬೂಲವನ್ನುಇಟ್ಟು ಪಾರ್ಥನೆ ಮಾಡುವದರ ಮೂಲಕ ಈ ನಾಟಿಕಾರ್ಯಕ್ಕೆ ಚಾಲನೆ ನೀಡಿದರು.
ಬೀಜದಆಯ್ಕೆ ಮತ್ತು ನೇಜಿಯನ್ನು ನಿಗದಿತ ದಿನದಂದುತೆಗೆದುಅಂತರ ಪ್ರಕಾರ ನಾಟಿ ಮಾಡುವ ಪ್ರಕ್ರಿಯೆಯ ಬಗ್ಗೆ ಜಯರಾಮ್ ಸುಧೆಕ್ಕಾರುರವರು ಮಾಹಿತಿಕೊಟ್ಟರು. ಹಾಗೆಯೇಟ್ರಾಕ್ಟರ್‍ನಲ್ಲಿ ಉಳುಮೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು.

IMG20190802111520
“ಟಿಲ್ಲರ್ ಮೂಲಕ ಉಳುಮೆ ಮಾಡಿದ್ದು ಸಂತೋಷವಾಯಿತು. ಪಠ್ಯೇತರಚಟುವಟಿಕೆಯಲ್ಲಿ ಭಾಗಿಯಾಗಲು ಕೃಷಿಸಂಘವು ಅವಕಾಶ ನೀಡಿದ್ದು ನಮಗೆ ನಮ್ಮ ಮನೆಯಲ್ಲಿಕೃಷಿಯಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡಿದೆ” ಎಂದುಟ್ರಾಕ್ಟರ್ ಮೂಲಕ ಉಳುಮೆ ಮಾಡಿದ 7ನೇ ತರಗತಿಯ ಸುಶಾಂತ್ ಹೇಳಿದರು
ನೆಟ್ಟಿಗದ್ದೆಗೆಮುಟ್ಟಾಲೆಇಟ್ಟು ನಾಟಿಕಾರ್ಯಕ್ಕೆಸಾಂಪ್ರದಾಯಿಕಉಡುಪಿನೊಂದಿಗೆ ಬಂದಂತಹ ವಿದ್ಯಾರ್ಥಿಗಳು ಹಿರಿಯ ನಾಟಿ ಪರಿಣತೆ ನಾಗಮ್ಮರವರ ನೇತೃತ್ವದಲ್ಲಿಜನಪದ ಸೊಬಗನ್ನು ಬಿಂಬಿಸುವ ಪಾಡ್ದನ ಹೇಳುತ್ತಾ ನೇಜಿಯನ್ನುತೆಗೆದರು. ಶಾಲಾಭಿವೃದ್ಧಿ ಸಮಿತಿಯವರು, ಮಾತೃಭಾರತಿ ಸಮಿತಿಯವರು, ಪೋಷಕರು, ಶಾಲಾ ಬಸ್ ಚಾಲಕರುಹಾಗೂ ಅಧ್ಯಾಪಕ ವೃಂದದವರುತಾವೂ ಭಾಗಿಯಾಗುವುದರ ಮೂಲಕ ವಿದ್ಯಾರ್ಥಿಗಳಿಗೆ ಸಹಕಾರವಿತ್ತರು.ಈ ರೀತಿತಾವೇಬೆಳೆದ ಬೆಳೆಯನ್ನು ಮಧ್ಯಾಹ್ನದ ಭೋಜನಕ್ಕೆಉಪಯೋಗಿಸುತ್ತಿದ್ದಾರೆ.
ಪ್ರತೀ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರುಒಂದೇ ಬಗೆಯಉಪಹಾರವನ್ನುತಂದುಒಂದೆಡೆ ಸೇರಿಸಿ ಸಾಮರಸ್ಯಉಪಹಾರಸವಿದಿರುವುದು ವಿಶೇಷವಾಗಿದೆ.ಅಧ್ಯಾಪಕರ ಸಹಕಾರದೊಂದಿಗೆಮಧ್ಯಾಹ್ನಕ್ಕೆಗಂಜಿ- ಚಟ್ನಿ ಹಾಗೂವಿದ್ಯಾರ್ಥಿಗಳೇ ತಯಾರಿಸಿದ ಉಪ್ಪಡ್ ಪಚ್ಚಿಲ್(ಹಲಸಿನಕಾಯಿ ಪಲ್ಯ)ವನ್ನುಒಂದೆಡೆ ಸೇರಿ ಸವಿದರು.
ಈ ನೇಜಿ ನಾಟಿಕಾರ್ಯದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದರಮೇಶ್, ಶಾಲಾಭಿವೃದ್ಧಿ ಸಮಿತಿಯಅಧ್ಯಕ್ಷರಾದಚಂದ್ರಶೇಖರ್ ಸಾಲ್ಯಾನ್, ಸದಸ್ಯರಾದಜಯರಾಂರೈ, ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀರಘುರಾಜ್, ಮಲ್ಲಿಕಾ ಶೆಟ್ಟಿ, ಸುಧಾಕಶೆಕೋಡಿ, ಪೋಷಕರಾದಜಯರಾಮ್ ಸುಧೆಕ್ಕಾರು, ಹಾಗೂ ಮುಖ್ಯೋಪಾಧ್ಯಾಯರಾದರವಿರಾಜ್‍ಕಣಂತೂರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *