ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ ಶ್ರೀ ರಾಜರಾಜೇಶ್ವರಿ ದೇವರುಗಳಿಗೆ ಇಂದು (ಮಾ.13ರ ಬುಧವಾರ) ಪ್ರಾತಃಕಾಲ 4ರಿಂದ ಪುಣ್ಯಾಹ, ಗಣಹೋಮ, ದ್ರವ್ಯಕಲಶಾಭಿಷೇಕ ನಡೆದು ಪೂರ್ವಾಹ್ನ 7.40ರಿಂದ 8.10ರ ಮೀನ ಲಗ್ನ ಸುಮುಹೂರ್ತದಲ್ಲಿ `ಬ್ರಹ್ಮಕಲಶಾಭಿಷೇಕ’ ನಡೆಯಲಿದೆ. ಬಳಿಕ ನ್ಯಾಸ, 11.30ಕ್ಕೆ ಮಹಾಪೂಜೆ, ಮಧ್ಯಾಹ್ನ ಪಲ್ಲಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ, 12.30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ.

01 ಸಾಯಂಕಾಲ 5ರಿಂದ ಮಹಾಪೂಜೆ, ದೊಡ್ಡರಂಗ ಪೂಜೆ, ರಾತ್ರಿ 8ರಿಂದ ಉತ್ಸವ ಬಲಿ, ಚಂದ್ರಮಂಡಲ ರಥ, ಬೆಳ್ಳಿ ರಥ ಮತ್ತು ಸಣ್ಣ ರಥೋತ್ಸವ, ವಸಂತ ಮಂಟಪದಲ್ಲಿ ಪೂಜೆ, ಅಷ್ಟವಧಾನ ಸೇವೆ, ಪಲ್ಲಕಿ ಉತ್ಸವ, ಮಹಾಪೂಜೆ ನಡೆಯಲಿದೆ. ರಾತ್ರಿ ಶ್ರೀ ಕೊಡಮಣಿತ್ತಾಯ ಮತ್ತು ಅರ್ಕುಳ ಶ್ರೀ ಉಳ್ಳಾಕ್ಲು-ಮಗೃಂತಾಯಿ ದೈವಗಳ ನೇಮೋತ್ಸವ ನಡೆದು ಸಂಪ್ರೋಕ್ಷಣೆ ನಡೆದ ಬಳಿಕ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ.

ಸಾಂಸ್ಕøತಿಕ  ಕಾರ್ಯಕ್ರಮಗಳು
13.03.2019 ಬುಧವಾರ
11.30-12.30 ಹರಿಕಥೆ ಶರತ್ ಶೆಟ್ಟಿ ಪಡುಪಳ್ಳಿ ಮತ್ತು ಬಳಗ
12.35-01.30 ರಂಗಗೀತೆ ಹುಲಿಕಲ್ ನಾಗರಾಜ್ ಮತ್ತು ಬಳಗ
01.35-1.45 ವಿಶೇಷ ಪ್ರತಿಭೆ- ತೀರ್ಥ ಪೊಳಲಿ
01.50-03.20 ನಾಟ್ಯ ವೈಭವ -ಸಂಯೋಜನೆ ರಾಕೇಶ್ ರೈ
03.25-04.55 ಸುಗಮ ಸಂಗೀತ:ಜಗದೀಶ್ ಆಚಾರ್ಯ ಮತ್ತು ಬಳಗ ಪುತ್ತೂರು
05.00-06.00 ಹೆಜ್ಜೆ-ಗೆಜ್ಜೆ- ಜ್ಞಾನ ಐತಾಳ್ ಮತ್ತು ಬಳಗ ಮಂಗಳೂರು
ಸಂಜೆ: ತಾಳಮದ್ದಳೆ

By suddi9

Leave a Reply

Your email address will not be published. Required fields are marked *