ಇಂಡಿಯನ್ ರೆಡ್ ಕ್ರಾಸ್ ಸೊಸ್ಯೆಟಿ ದ ಕ ಇವರ ಸಹಯೋಗ ದೊಂದಿಗೆ 100 ನೇ ರಕ್ತದಾನ ಶಿಬಿರ
ಫರಂಗಿಪೇಟೆ: ಸೇವಾಂಜಲಿ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಜ । ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ , ಕೆ ಎಂ ಸಿ ಆಸ್ಪತ್ರೆ ಮಂಗಳೂರು, ಇಂಡಿಯನ್ ರೆಡ್ ಕ್ರಾಸ್ ಸೊಸ್ಯೆಟಿ ದ ಕ ಇವರ ಸಹಯೋಗ ದೊಂದಿಗೆ 100 ನೇ ರಕ್ತದಾನ ಶಿಬಿರ ಸೇವಾನಜಲಿ ಸಭಾಂಗಣ ದಲ್ಲಿ ನಡೆಯಿತು .
ಸಹಾಯಕ ಪೊಲೀಸ್ ಅಧೀಕ್ಷಕರು ಸೈದುಲ್ ಆಡಾವತ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು ಅಲ್ಲದೆ ಸ್ವತಃ ರಕ್ತದಾನ ಮಾಡಿ ಮಾತನಾಡಿದ ಅವರು ಸತತ 23 ವರ್ಷಗಳಿಂದ 100 ಶಿಭಿರಗಳನ್ನು ಆಯೋಜಿಸಿ ಸುಮಾರು 6000 ಯುನಿಟ್ ರಕ್ತ ಸಂಗ್ರಹಿಸುತ್ತಿರುವುದು ಸುಲಭ ದ ಮಾತಲ್ಲ ಕೃಷ್ಣ ಕುಮಾರ್ ಪೂಂಜಾ ರವರ ಸೇವೆಯನ್ನು ಮೆಚ್ಚಲೇ ಬೇಕು ಎಂದರು ಆ ನಂತರ ಮಾತನಾಡಿದ ದ ಕ ಧಾರ್ಮಿಕ ಪರಿಷದ್ ಸದಸ್ಯರಾದ ಜಗನ್ನಾಥ್ ಚೌಟ ರವರು ರಕ್ತ ದಾನ ಮಾಡುವುದು ನಮ್ಮ ಕರ್ತವ್ಯ ಆ ಮೂಲಕ ಇನ್ನೊಬ್ಬರಿಗೆ ಜೀವ ದಾನ ನೀಡುವುದು ಪುಣ್ಯ ದ ಕೆಲಸ , ಈ ಸೇವೆಯ ಮಹತ್ವ ವನ್ನು ಜನಸಾಮಾನ್ಯಗೆ ಅರಿವು ಮೂಡಿಸಿ ಶಿಬಿರಗಳನ್ನು ಆಯೋಜಿಸುವ ಮೂಲಕ ಪೂಂಜರು ಶ್ರೇಷ್ಠತೆ ಮೆರೆದಿದ್ದಾರೆ ಎಂದರು.
ಇನ್ನೋರ್ವ ಅತಿಥಿ ಕಾಪೋರೇಷನ್ ಬ್ಯಾಂಕ್ ತುಂಬೆ ಇಲ್ಲಿನ ಮೆನೇಜರರಾದ ಸಂದೇಶ್ ತುಪ್ಪೆಕಲ್ಲು ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಈ ಸಂದರ್ಭದಲ್ಲಿ ಸಹ್ಯಾದ್ರಿ ಇಂಜಿನೀರಿಂಗ್ ಕಾಲೇಜು ಅಡ್ಯಾರ್ ಇದರ ನಿರ್ದೇಶಕ ರಾದ ದೇವದಾಸ್ ಹೆಗ್ಡೆ , ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ ನರಿಕೊಂಬು , ಬಿ ಎ ತಾಂತ್ರಿಕ ವಿದ್ಯಾ ಸಂಸ್ಥೆ ಯ ತರಬೇತಿ ಅಧಿಕಾರಿ ಕಿಶನ್ , ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ , ತಾಲೂಕ ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ತುಂಬೆ , ಗಣೇಶ್ ಸಾಲ್ಯಾನ್ , ಪ್ರಕಾಶ್ ಕಿದೆ ಬೆಟ್ಟು ,ಮಾಜಿ ತಾಲೂಕು ಪಂಚಾಯತ್ ಸದಸ್ಯ ಸೋಮಪ್ಪ ಕೋಟ್ಯಾನ್ ತುಂಬೆ , ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪುರುಷ ಸಾಲ್ಯಾನ್ ಪದ್ಮನಾಭ ಶೆಟ್ಟಿ ಪುಂಚಮೆ , ಮತ್ತಿತರರು ಉಪಸ್ಥಿತರಿದ್ದರು ರಕ್ತದಾನ ಶಿಬಿರ ದಲ್ಲಿ 248 ಯುನಿಟ್ ರಕ್ತ ಸಂಗ್ರಹ ವಾಯಿತು
ಸೇವಾಂಜಲಿ ಪ್ರತಿಷ್ಠಾನ ದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಸ್ವಾಗತಿಸಿದರು , ತಾರಾನಾಥ್ ಕೊಟ್ಟಾರಿ ಯವರು ವಂದಿಸಿದರು ಕೊಡ್ಮಾಣ್ ದೇವದಾಸ್ ಶೆಟ್ಟಿ ಯವರು ನಿರೂಪಿಸಿದರು