ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸೇವಾ ರತ್ನ ಶ್ರೀ ಕೃಷ್ಣ ಕುಮಾರ್ ಪೂಂಜಾ ಅಭಿಮಾನದ ಅಭಿನಂದನೆ
ಫರಂಗಿಪೇಟೆ:2018 ರ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಸೇವಾ ರತ್ನ ಶ್ರೀ ಕೃಷ್ಣ ಕುಮಾರ್ ಪೂಂಜಾ ಇವರಿಗೆ ಅಭಿಮಾನದ ಅಭಿನಂದನೆ ಕಾರ್ಯಕ್ರಮ ಡಿಸೆಂಬರ್ ತಿಂಗಳ 25ನೇ ತಾರೀಕು ಮಂಗಳವಾರ ಫರಂಗಿಪೇಟೆ ಸೇವಾಂಜಲಿ ಸಭಾಗೃಹ ದಲ್ಲಿ ನಡೆಯಲಿದೆ.
ಇದರ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷರಾದ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಯವರು ಕಾರ್ಯಕ್ರಮ ದ ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿದರು . ಈ ಸಂದರ್ಭ ದಲ್ಲಿ ಅರ್ಕುಳ ಕೋಟೆ ಝಪ್ರುಲ್ಲಾ ಒಡೆಯರ್ , ದೇವಸ್ಯ ಪ್ರಕಾಶ್ಚಂದ್ರ ರೈ , ಕೊಡ್ಮಣ್ ದೇವದಾಸ್ ಶೆಟ್ಟಿ , ಪುದು ಪಂಚಾಯತ್ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ , ಪುಂಚಮೆ ಪದ್ಮನಾಭ ಶೆಟ್ಟಿ , ಸೋಮಪ್ಪ ಕೋಟ್ಯಾನ್ ತುಂಬೆ ,ಜಗನ್ನಾಥ್ ಚೌಟ , ಉಮರ್ ಫಾರೂಕ್ , ಮೊಹಮ್ಮದ್ ಬಾವ , ಯೂಸುಫ್ ಅಲಂಕಾರ್ ಬೀಡಿ , , ಎಂ ಕೆ ಖಾದರ್ ಫರಂಗಿಪೇಟೆ , ಮನೋಹರ್ , ಜಗದೀಶ್ , ಅಶ್ರಫ್ , ಸುಕೇಶ್ ಶೆಟ್ಟಿ ತೇವು , ಹರಿಶ್ಚಂದ್ರ ಆಳ್ವ ಪದೆಂಜಾರ್ ಮತ್ತಿತರರು ಉಪಸ್ಥಿತರಿದ್ದರು , ತಾರಾನಾಥ್ ಕೊಟ್ಟಾರಿ ತೇವು ರವರು ಪೂರ್ವಭಾವಿ ಸಭೆ ಯನ್ನು ನಿರ್ವಹಿಸಿದರು