ಪುದು ಹಿಂದೂ ರುದ್ರ ಭೂಮಿ ಶಿಲಾನ್ಯಾಸ
ಫರಂಗಿಫೇಟೆ: ಪುದು ಗ್ರಾಮ ಕ್ಕೆ ಒಂದೇ ಒಂದು ಹಿಂದೂ ರುದ್ರ ಭೂಮಿ ಇಲ್ಲ ಎಂಬ ಕೂಗು ಕಳೆದ ಎರಡು ದಶಕಗಳಿಂದ ಕೇಳಿ ಬರುತಿತ್ತು , ಗ್ರಾಮಸ್ಥರು ಶವ ಸಂಸ್ಕಾರಕ್ಕೆ ತುಂಬೆ ಗ್ರಾಮದ ರುದ್ರ ಭೂಮಿ ಅಥವಾ ಬಂಟ್ವಾಳಕ್ಕೆ ಅವಲಂಬಿತರಾಗಿದ್ದರು . ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಸದಸ್ಯರು ರವೀಂದ್ರ ಕಂಬಳಿ ಯವರು ಹಾಗೂ ಎ ಪಿ ಎಂ ಸಿ ಸದಸ್ಯ ವಿಠ್ಠಲ್ ಸಾಲ್ಯಾನ್ ರವರು ಸಮಾಜ ಕಲ್ಯಾಣ ಇಲಾಖೆ ಯ ಪರಿಶಿಷ್ಟ ಜಾತಿ ಮತ್ತು ಪಂಗಡ ಮೀಸಲಾಗಿದ್ದ ಅನುದಾನದಿಂದ ಮಂಜೂರಾಗುವಲ್ಲಿ ಶ್ರಮಿಸಿದರು .
ನಾಗ ಬ್ರಹ್ಮ ಸನ್ನಿದಿ ಶ್ರೀ ಕೋರ್ದಬ್ಬು ದೈವಸ್ಥಾನ ಇದರ ಆಡಳಿತ ಮೊಕ್ತೇಸರ ರಾದ ಭಾಸ್ಕರ ಚೌಟ ಕುಮುಡೇಲು ರವರು ಶಿಲಾನ್ಯಾಸ ಗೈವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು . ಸುಬ್ರಮಣ್ಯ ಸನ್ನಿದಿ ದೆಕ್ಕೇದು ಇಲ್ಲಿನ ಅರ್ಚಕರಾದ ಲೋಕನಾಥ್ ಆಚಾರ್ಯ ರವರು ಪೂಜಾ ಕಾರ್ಯ ನೆರವೇರಿಸಿದರು ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯರು ರವೀಂದ್ರ ಕಂಬಳಿ , ಎ ಪಿ ಎಂ ಸಿ ಸದಸ್ಯ ವಿಠ್ಠಲ್ ಸಾಲ್ಯಾನ್ , ಪುದು ಪಂಚಾಯತ್ ಉಪಾಧ್ಯಕ್ಷರಾದ ಲಿಲ್ಲಿ ಪಿಂಟೋ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರೇಮ , ಪಂಚಾಯತ್ ಸದಸ್ಯರುಗಳಾದ ಮನೋಜ್ ಆಚಾರ್ಯ ನಾಣ್ಯ , ಸಂತೋಷ್ ನೆತ್ತರಕೆರೆ , ಆಶಾ ನಯನ , ಜಯಂತಿ ದೇವದಾಸ್ , ಸರೋಜಿನಿ , ನಾಗವೇಣಿ , ಸ್ಥಳೀಯ ಗಣ್ಯರುಗಳಾದ ಸುಬ್ರಮಣ್ಯ ರಾವ್ , ಶಾಂತ ಡಿ ಚೌಟ , ದೇವದಾಸ್ ಚೌಟ , ದಿನೇಶ್ ಶೆಟ್ಟಿ ಕೊಟ್ಟಿಂಜ , ಪ್ರಕಾಶ್ ಶೆಟ್ಟಿ ಕುಮುಡೇಲು, ಧೀರಜ್ ಮಾರಿಪಳ್ಳ , ಶಿವರಾಮ್ ಕುಮುಡೇಲು ,ಜಗದೀಶ್ ಕುಮುಡೇಲು , ಗುತ್ತಿಗೆ ದಾರರಾದ ಕೈಲಾಶ್ ಬಾಬು , ಜೀವನ್ ಮತ್ತಿತರರು ಉಪಸ್ಥಿತರಿದ್ದರು