ಫರಂಗಿಪೇಟೆ : ನಮ್ಮ ಜೀವನ ಸಮಾಜಕ್ಕಾಗಿ ಮುಡಿಪಾಗಿರಲಿ , ಸಮಾಜಕ್ಕೆ ನಮ್ಮ ಪಾಲು ಏನು ಎಂಬ ಚಿಂತನೆ ನಮ್ಮಲ್ಲಿರಲಿ ಎಂದು ಖ್ಯಾತ ಭಾಗವತರು , ಯಕ್ಷದ್ರುವ ಪಟ್ಲ ಫೌಂಡೇಷನ್ ನ ಸ್ಥಾಪಕಾಧ್ಯಕ್ಷರು ಸತೀಶ್ ಶೆಟ್ಟಿ ಪಟ್ಲ ಹೇಳಿದರು.
ಕೊಡ್ಮಾಣ್ ದ ಕ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶ್ರೀ ರಾಮ ಮಂದಿರ ಕೊಟ್ಟಿಂಜ ಇದರ ಆಶ್ರಯ ದಲ್ಲಿ ನಡೆಯುವ ಶ್ರೀ ರಾಮ ಚೈತನ್ಯ ಯೋಜನೆ ಅಡಿಯಲ್ಲಿ 3ನೇ ವರ್ಷದ ರಕ್ತದಾನ ಶಿಬಿರ ಹಾಗು ಉಚಿತ ವೈದ್ಯಕೀಯ ಶಿಬಿರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

IMG_8094news
ಮಂದಿರದ ಗೌರವಾಧ್ಯಕ್ಷರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ ಯವರು ಮಾತನಾಡಿ ಕಳೆದ 3 ವರ್ಷಗಳಿಂದ ಶ್ರೀ ರಾಮ ಚೈತನ್ಯ ಯೋಜನೆ ಯಿಂದ ಕೊಟ್ಟಿಂಜ , ಕೊಡ್ಮಣ್ ಪರಿಸರದ ಸಾವಿರಾರು ಮಂದಿಗೆ ವೈದ್ಯಕೀಯ ಸಹಾಯ , ವೈದ್ಯಕೀಯ ಉಪಕರಣ ಗಳನ್ನು ಅಲ್ಲದೆ ವೈದ್ಯಕೀಯ ವಿಮೆ ಯನ್ನು ಉಚಿತ ವಾಗಿ ನೀಡಲಾಗಿದೆ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬಂತೆ ಈ ಯೋಜನೆ ಗೆ ನೆರವು ನೀಡುತ್ತಿರುವ ದುಬೈಯಲ್ಲಿರುವ ಉದ್ಯಮಿ ದಿನೇಶ್ ಶೆಟ್ಟಿ ಯವರನ್ನು ಶ್ಲ್ಯಾಘಿಸಿದರು.
ಆಕಸ್ಮಿಕ ವಾಗಿ ಬಿದ್ದು ಸೊಂಟ ಮುರಿದು ಶಾಶ್ವತ ಅಂಗ ಹೀನತೆ ಗೊಂಡ ಕೊಡಂಗೆ ಜನಾರ್ದನ ಎಂಬವರಿಗೆ ಅವರ ಸಹೋದರ ನ ಮೂಲಕ ಗಾಲಿ ಕುರ್ಚಿ ಯನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಮಂದಿರದ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ , ಕೆ ಎಸ್ ಹೆಗ್ಡೆ ಆಸ್ಪತ್ರೆ ಯ ವೈದ್ಯಾಧಿಕಾರಿಗಳಾದ ಡಾ ಅಂಜನಾ , ಡಾ ರೂಹಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದಿನೇಶ್ ಶೆಟ್ಟಿ ಯವರು ಸ್ವಾಗತಿಸಿದರು

By suddi9

Leave a Reply

Your email address will not be published. Required fields are marked *