ಬಂಟ್ವಾಳ: ಇಲ್ಲಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಕಾರ್ಯಕ್ರಮವು ಇದೇ 13ರಂದು ನಡೆಯಲಿದೆ. ಅಂದು ಬೆಳಿಗ್ಗೆ 8ಗಂಟೆಗೆ ಪಂಚಾಮೃತ ಮತ್ತು ಪವಮಾನ ಅಭಿಷೇಕ, 9ಗಂಟಗೆ ತುಲಾಭಾರ ಸೇವೆ, 11 ಗಂಟೆಗೆ ಮಹಾಪೂಜೆ, 11.30ರಿಂದ ಷಷ್ಠಿ ಮಹೋತ್ಸವ, ದೇವರ ಬಲಿ ಉತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
