ಬಂಟ್ವಾಳ : ಎಪಿಎಂಸಿ ಬಂಟ್ವಾಳ ಇದರ ವತಿಯಿಂದ ಮಂಜೂರಾತಿಯಾದ ರಸ್ತೆ ಕಾಂಕ್ರಿಟೀಕರಣ ಯೋಜನೆಯಡಿಯಲ್ಲಿ ಬಂ.ತಾಲೂಕಿನ ಗೋಳ್ತಮಜಲು ಗ್ರಾಮದ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಬಳಿಯಿಂದ ಪಡ್ಡೆಮಜಲು ರಸ್ತೆ ಕಾಂಕ್ರಿಟೀಕರಣ ಕಾಮಗಾರಿಯ ಗುದ್ದಲಿಪೂಜೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.KAR_5236
ಅವರು ನೆಟ್ಲ ದೇವಸ್ಥಾನದ ಸಭಾಂಗಣದಲ್ಲಿ ಮಾತನಾಡುತ್ತಾ ಗ್ರಾಮೀಣ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ತರಲು ಇಂತಹಾ ರಸ್ತೆಗಳು ಪ್ರಯೋಜನಕಾರಿಯಾಗಿದ್ದು ಎಪಿಎಂಸಿ ಯ ಕಾರ್ಯವನ್ನು ಶ್ಲಾಘಿಸಿದರು. ಇತ್ತೀಚಿನ ದಿನಗಳಲ್ಲಿ ಎಪಿಎಂಸಿ ಪ್ರಾಂಗಣಕ್ಕೆ ಜಾಮೀನು ಮಂಜೂರಾತಿ ಮಣಿನಾಲ್ಕೂರುಮತ್ತು ಮಾಣಿಯಲ್ಲಿ ಸಂತೆ ಮಾರುಕಟ್ಟೆ ಹಾಗೂ ನೂತನ ಎಪಿಎಂಸಿ ಪ್ರಾಂಗಣದಲ್ಲಿ 1.25ಕೋಟಿ ವೆಚ್ಚದ ಗೋಡೌನ್ ನಿರ್ಮಾಣ ಕಾರ್ಯ ನಡೆಯಲಿದ್ದು ಅಧ್ಯಕ್ಷ ಪದ್ಮನಾಭ ರೈ ಹಾಗೂ ಸಮಿತಿಯ ಕೆಲಸವನ್ನು ಶ್ಲಾಘಿಸಿದರು.KAR_5238
ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಮಾತನಾಡಿ ಎಪಿಎಂಸಿ ವತಿಯಿಂದ 2017-18ನೇ ಸಾಲಿನಲ್ಲಿ ರೂ.30ಲಕ್ಷ ಅಂದಾಜು ವೆಚ್ಚದಲ್ಲಿ 14ರಸ್ತೆಗಳ ರಚನೆಗೆ ಮಂಜೂರಾತಿ ಯಾಗಿದ್ದು ಈ ಎಲ್ಲಾ ರಸ್ತೆಗಳು ಒಂದು ತಿಂ ಗಳ ಅವಧಿಯಲ್ಲಿ ಪೂರ್ಣಗೊಳ್ಳುವುದು . 2018-19ನೇ ಸಾಲಿನಲ್ಲಿ ಅಂದಾಜು 39ಲಕ್ಷ ವೆಚ್ಚದಲ್ಲಿ 13 ಕಾಮಗಾರಿಗಳು ನಡೆಯಲಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಸದ್ಯದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು.

By suddi9

Leave a Reply

Your email address will not be published. Required fields are marked *