ವಾಷಿಂಗ್ಟನ್: ಕಳೆದ ಹಲವಾರು ತಿಂಗಳಿಂದ ಎಬೋಲಾ ನರಹಂತಕ ರೋಗ ಕೊನೆಗೂ ಹತೋಟಿಗೆ ಬಂದಿದ್ದು, ಹೊಸತಾಗಿ ಯಾರಲ್ಲೂ ಎಬೋಲಾ ವೈರಸ್ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.  ಆದರೂ ಆತಂಕ ಮಾತ್ರ ಯತಾಸ್ಥಿತಿಯಲ್ಲಿ ಮುಂದುವರಿದಿದೆ.

ebola1

ebola2

 

ಈಗಾಗಲೇ ಎಬೋಲಾಕ್ಕೆ  ಆಫ್ರಿಕಾದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 2100 ಮಂದಿಗೆ ಎಬೋಲಾ ವೈರಸ್ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಈ ವೈರಸನ್ನು ತೊಡೆದುಹಾಕಲು ಶತಾಯಗತಾಯ ಪ್ರಯತ್ನಿಸುತ್ತಿದ್ದು, ನಿಧಾನವಾಗಿ ಯಶಸ್ವಿಯಾಗುತ್ತಿದೆ. ಅಲ್ಲದೆ ಈ ರೋಗ ಹಠಾತ್ ಒಂದು ಪ್ರದೇಶದಲ್ಲಿ ಕಾಣಿಸಿಕೊಂಡು ನಂತರ ನಿಧಾನವಾಗಿ ಕಡಿಮೆಯಾಗುವ ರೋಗವಾಗಿದೆ. ಶತಮಾನಗಳ ಹಿಂದೆಯೂ ಇಂಥದ್ದೇ ರೋಗ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದು , ನಂತರದ ದಿನಗಳಲ್ಲಿ ನಿಧಾನವಾಗಿ ಕಡಿಮೆಯಾಗಿದೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.

ಆಫ್ರಿಕಾದಲ್ಲಿ ಈಗಾಗಲೇ ಜನತೆಯನ್ನು ಮನೆಬಿಟ್ಟು ಹೊರಬಾರದಂತೆ ಹೇಳಲಾಗಿದೆ. ಆಫ್ರಿಆದದ ಜನತೆಯ ರಕ್ತಪರೀಕ್ಷೆ ನಡೆಸಲಾಗಿದ್ದು, ಹೊಸತಾಗಿ ಯಾರಲ್ಲೂ ಎಬೋಲಾ ವೈರಸ್ ಪತ್ತೆಯಾಗಿಲ್ಲ ಎಂದು ವಶ್ವಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *