ಇಸ್ಲಾಮಾಬಾದ್: ಹಲವಾರು ಸಮಯಗಳಿಂದ ಆಂತರಿಕ ಬೇಗುದಿಯಿಂದ ತೊಳಲಾಟ ನಡೆಸುತ್ತಿರುವ ಪಾಕಿಸ್ತಾನದಲ್ಲಿ ಮತ್ತೆ ಸೇನಾಡಳಿತ ಬರುವ ಸಾಧ್ಯತೆ ನಿಚ್ಚಳವಾಗಿದೆ. ಪ್ರಧಾನಿ ನವಾಜ್ ಶರೀಪ್ ವಿರುದ್ದ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಸಾರಥ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ನವಾಜ್ ರಾಜೀನಾಮೆಗೆ ಭಾರೀ ಒತ್ತಡ ಕೇಳಿಬಂದಿದೆ.
ಹೀಗಾಗಿ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಂತ್ಯ ಕಾಣಲಿದ್ದು, ಮತ್ತೆ ಮಿಲಿಟರಿ ಆಡಳಿತ ಜಾರಿಯಾಗುವ ಸಾಧ್ಯತೆ ಗೋಚರವಾಗುತ್ತಿವೆ. ಸುಮಾರು 11 ಮಂದಿ ಸೇನಾ ನಾಯಕರು ಈ ವಿರೋಧವನ್ನು ಅನುಮೋದಿಸುತ್ತಿದ್ದರೆ, ಸೇನಾ ಮುಖ್ಯಸ್ಥ ರಶೀಲ್ ಷರೀಷ್ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಿತ್ತೊಗೆಯಲು ಇದು ಸರಿಯಾದ ಸಮಯವಲ್ಲ. ಹೀಗಾಗಿ ಸಮಸ್ಯೆಯನ್ನು ರಾಜಕೀಯ ನಡೆಗಳಿಂದ ಪರಿಹರಿಸಬೇಕೇ ವಿನಾ ಮಿಲಿಟರಿ ಶಕ್ತಿ ಬಳಸಿ ಅಲ್ಲ. ರಾಜಿನಾಮೆ ಪಡೆಯುವುದಾದರೂ ಮಾತುಕತೆಯಿಂದಲೇ ಮುನ್ನಡೆಯಲಾಗುವುದು ಎಂದಿದ್ದಾರೆ. ಇದೇ ವೇಳೆ ಸಮಸ್ಯೆಯಿಂದ ಹೊರಬರಲು ಪ್ರಧಾನಿ ಷರೀಷ್ ಸಂಸತ್ತಿನ ಎಲ್ಲ ಪಕ್ಷಗಳ ಸಹಕಾರಕ್ಕೆ ಮೊರೆ ಹೋಗಿದ್ದಾರೆ. ಮಿಲಿಟರಿ ಆಡಳಿತ ಹೇರಲ್ಪಟ್ಟರೆ ದೇಶದಲ್ಲಿ ಪ್ರಜಾಪ್ರಭುತ್ವ ಕೊನೆಗಾಣಲಿದೆ.