Published On: Mon, Sep 24th, 2018

ಸಾಂಸ್ಕøತಿಕ ಚಟುವಟಿಕೆಗಳು ಜನರನ್ನು ಇಗ್ಗೂಡಿಸುತ್ತದೆ: ಇ.ಚಂದ್ರಶೇಖರನ್

ಬದಿಯಡ್ಕ: ಯಕ್ಷಗಾನ, ಸಂಗೀತ ಕಲೆಗಳು ಸಾಮಾಜಿಕ ಏಕತೆಗೆ ಶಕ್ತಿ ನೀಡುತ್ತದೆ. ಸಾಂಸ್ಕøತಿಕ ಚಟುವಟಿಕೆಗಳು ಜನರನ್ನು ಒಗ್ಗೂಡಿಸುವಲ್ಲಿ ಪ್ರಧಾನ ಪಾತ್ರವಹಿಸುವುದರ ಜೊತೆಗೆ ನಾಡಿನ ಶಾಂತ ಸಮಾಜಕ್ಲೆ ಪ್ರೇರೇಪಿಸುತ್ತದೆ. ಕ್ರಿಯಾತ್ಮಕತೆಯೆಡೆಗೆ ಕೊಂಡೊಯ್ಯುವ ಸಾಮಥ್ರ್ಯದೊಂದಿಗೆ ಮಣ್ಣಿನ ಸತ್ವವನ್ನು ಪ್ರಚುರಪಡಿಸುತ್ತದೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಎಂದು ಹೇಳಿದರು.

Keshavananda BharatiSwamiji Chaturmasya Samaropa (6)
ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಸವಾನಂದ ಭಾರತೀ ಶ್ರೀಗಳ 58ನೇ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ಶ್ರೀಮಠದಲ್ಲಿ ಆಯೋಜಿಸಲಾದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ.ಟಿ.ಶಾಮ್ ಭಟ್ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Keshavananda BharatiSwamiji Chaturmasya Samaropa (5)
ಕಲಾ ಸಾಂಸ್ಕøತಿಕ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸುವ ಹಿರಿಯರನ್ನು ಸನ್ಮಾನಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದ್ದು, ಇತರರಿಗೆ ಮಾದರಿಯಾಗಿ ಪ್ರೇರಣೆ ನೀಡುತಿದೆ. ಶ್ರೀಮದ್ ಎಡನೀರು ಮಠದ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಸೇವೆಯು ರಾಷ್ಟ್ರಮಟ್ಟದಲ್ಲೇ ಗುರುತಿಸುವಂತಾಗಿದ್ದು, ಈ ಕಾರಣದಿಂದ ಮಠದ ಪರಂಪರೆಗೆ ಬಲ ನೀಡಿದೆ ಎಂದು ಅವರು ಈ ಸಂದರ್ಭ ಶ್ಲಾಘನೆ ವ್ಯಕ್ತಪಡಿಸಿದರು.
ಶೃಂಗೇರಿ ಶ್ರೀಶಾರದಾಪೀಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರೀಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಆದರ್ಶ ವ್ಯಕ್ತಿಗಳಿಂದ ಮಾತ್ರ ಸಮಾಜಕ್ಕೆ ಉತ್ತಮ ಪ್ರೇರಣೆ ಪಡೆಯುತ್ತದೆ ಸಾಧ್ಯ ಎಂದು ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಶೀರ್ವಚನಗೈದು ಮಾತನಾಡಿ, ಜೀವನದಲ್ಲಿ ಮನುಷ್ಯ ಪ್ರಯತ್ನಗಳಿಂದ ಹುದ್ದೆ, ಅಂತಸ್ತು, ಸಂಪತ್ತುಗಳನ್ನು ಸಂಪಾದಿಸಬಹುದು. ಆದರೆ ಸತ್ ಚಾರಿತ್ರ್ಯ, ಸರಳತೆ ಮತ್ತು ಹೃದಯ ವೈಶಾಲ್ಯತೆಯನ್ನು ಮೈಗೂಡಿಸುವ ಸಾಮಥ್ರ್ಯ ನಿಜವಾದ ಸಂಪಾದನೆಯಾಗಿದ್ದು, ಶಾಮ ಭಟ್ ಅಂತಹ ಅಪೂರ್ವ ವ್ಯಕ್ತಿತ್ವದವರು ಎಂದು ತಿಳಿಸಿದರು. ಸಜ್ಜನಿಕೆ, ಸರಳತೆಗಳು ಜೀವನದಲ್ಲಿ ಎತ್ತರಕ್ಕೊಯ್ಯುವ ಪ್ರಧಾನ ಮೆಟ್ಟಲುಗಳು ಎಂದು ತಿಳಿಸಿದರು.

Keshavananda BharatiSwamiji Chaturmasya Samaropa (2)
ಸಮಾರಂಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ, ಸಾಂಸ್ಕøತಿಕ, ಸಾಮಾಜಿಕ, ಧಾರ್ಮಿಕ ಪೋಷಕ ಡಾ.ಟಿ.ಶಾಮ್ ಭಟ್ ಅವರಿಗೆ “ಶ್ರೀಗುರು ಸೇವಾ ಪಾರೀಣ” ಪ್ರಶಸ್ತಿ ಪ್ರಧಾನಗೈದು ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಟಿ.ಶಾಮ್ ಭಟ್ ಅವರು, ತನ್ನ ವಿವಿಧ ಅಧಿಕಾರಾವಧಿಯ ವಿವಿಧ ಹುದ್ದೆಗಳಲ್ಲಿ ನ್ಯಾಯ-ನಿಷ್ಠುರನಾಗಿ, ಹೆಚ್ಚು ವಿವಾದಾತ್ಮಕ ವ್ಯಕ್ತಿಯಾಗಿ ಮುನ್ನಡೆಯುವಲ್ಲಿ ಅನುಭವಿಸಿದ ವಿಚಾರಗಳನ್ನು ಹಂಚಿಕೊಂಡ ಅವರು ಆಡಳಿತಾತ್ಮಕವಾಗಿ ಸಾಗರೋಪಾದಿಯಯಲ್ಲಿ ಮಾದರಿಯಾಗಿರುವ ಶ್ರೀಶೃಂಗೇರಿ ಮಠದಿಂದ ಐಎಎಸ್, ಕೆಎಎಸ್‍ನ ಹೊಸ ತಲೆಮಾರು ತರಬೇತಿ ಪಡೆಯಬೇಕು ಎಂದು ತಿಳಿಸಿದರು. ಕಲೆ, ಸಾಂಸ್ಕøತಿಕತೆಗಳಿಗೆ ಬೆಸೆಯುವ-ಬೆಳೆಸುವ ಮತ್ತು ಮುನ್ನಡೆಸುವ ಶಕ್ತಿಯನ್ನು ಹೊಸ ತಲೆಮಾರಿಗೆ ತಿಳಿಯಪಡಿಸುವ ಅಗತ್ಯ ಇಂದು ಅಗತ್ಯವಿದ್ದು, ಶ್ರೀ ಎಡನೀರು ಮಠದ ಅಂತಹ ಚಟುವಟಿಕೆಗಳು ಎಂದಿಗೂ ಮಾದರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ಮುರಳೀ ರಾಯರಮನೆ ನಿರ್ಮಿಸಿದ ಶ್ರೀಮಠದ ಕುರಿತಾದ ಸಾಕ್ಷ್ಯಚಿತ್ರವನ್ನು ಈ ಸಂದರ್ಭದಲ್ಲಿ ಶೃಂಗೇರಿ ಶ್ರೀಶಾರದಾ ಪೀಠದ ಆಡಳಿತಾಧಿಕಾರಿ. ಡಾ.ವಿ.ಆರ್.ಗೌರೀಶಂಕರ್ ಬಿಡುಗಡೆಗೊಳಿಸಿದರು. ಶ್ರೀಮಠದ ಪೋಟೋ ಆಲ್ಬಂನ್ನು ಉದುಮ ಶಾಸಕ ಕೆ.ಕುಂಞರಾಮನ್ ಬಿಡುಗಡೆಗೊಳಿಸಿದರು. ನಂತರ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಲಾಯಿತು. ಯಕ್ಷಗಾನ ಅರ್ಥಧಾರಿ, ಸಾಹಿತಿ ಡಾ.ರಮಾನಂದ ಬನಾರಿ ಅಭಿನಂದನಾ ಭಾಷಣಗೈದರು.

Keshavananda BharatiSwamiji Chaturmasya Samaropa (1)
ಸಭಾ ಕಾರ್ಯಮವನ್ನು ಮೊದಲಿಗೆ ಸಂಸದ ಡಾ.ಎಂ.ವೀರಪ್ಪ ಮೊೈಲಿ ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀಪತಿ ಕುಬಣೂರಾಯ ಹಾಗೂ ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಪತ್ರ ವಾಚಿಸಿದರು. ಸುರೇಶ್ ನಾಯಕ್, ರಾಘವೇಂದ್ರ, ಡಾ.ಬಿ.ಎಸ್.ರಾವ್, ಜಯರಾಮ ಮಂಜತ್ತಾಯ ಎಡನೀರು, ಶರತ್‍ಕುಮಾರ್ ಮಾಸ್ತರ್ ಪುತ್ತೂರು, ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ರಮೇಶ್ ಭಟ್ ಪುತ್ತೂರು, ಬಿ.ವಿಷ್ಣುಮೂರ್ತಿ ಕಕ್ಕಿಲ್ಲಾಯ ಮೊದಲಾದವರು ಸಹಕರಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್‍ಕುಮಾರ್ ಕಟೀಲು, ಉದುಮ ಶಾಸಕ ಕೆ.ಕುಂಞರಾಮನ್, ಶಾಸಕ ಅಭಯಚಂದ್ರ ಜೈನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಠದ ಪ್ರಬಂಧಕ ನ್ಯಾಯವಾದಿ ಐ.ವಿ.ಭಟ್ ಸ್ವಾಗತಿಸಿ, ರಾಜೇಂದ್ರ ಕಲ್ಲೂರಾಯ ಎಡನೀರು ವಂದಿಸಿದರು. ಡಾ.ಎಂ.ಎಲ್.ಸಾಮಗ ಹಾಗೂ ವಿದ್ವಾನ್.ಹಿರಣ್ಯ ವೆಂಕಟೇಶ ಭಟ್ ಕಾರ್ಯಕ್ರಮ ನಿರೂಪಿಸಿದರು.

Keshavananda BharatiSwamiji Chaturmasya Samaropa (4)
ಕಾರ್ಯಕ್ರಮದ ಬಳಿಕ ಶ್ರೀಎಡನೀರು, ಶ್ರೀಹನುಮಗಿರಿ ಮೇಳಗಳು ಮತ್ತು ಅತಿಥಿ ಕಲಾವಿದರಿಂದ ವಿದ್ವಾಮಿತ್ರ ಮೇನಕೆ, ಶ್ರೀರಾಮ ದರ್ಶನ, ಊರ್ವಶಿ-ಪುರೂರವ, ತಿಲೋತ್ತಮೆ ಮತ್ತು ಸೀತಾ ಕಲ್ಯಾಣ ಪ್ರಸಂಗಗಳ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಸಭಾ ಕಾರ್ಯಕ್ರಮಕ್ಕೂ ಮೊದಲು ವಯಲಿನ್-ವಿಣಾ ಜುಗಲ್‍ಬಂದಿಗಳ ನಾದಾಭಿನಂದನೆ ನಡೆಯಿತು. ವಿದ್ವಾನ್.ಆರ್.ಕುಮಾರೇಶ್(ವಯಲಿನ್), ವಿದುಷಿಃ ಡಾ. ಜಯಂತಿ ಕುಮಾರೇಶ್(ವೀಣೆ),ಟ್ರಿಚ್ಚಿ ಬಿ.ಹರಿಕುಮಾರ್(ಮೃದಂಗ) ಹಾಗೂ ವಳಪ್ಪಳ್ಳಿ ಕೃಷ್ಣಕುಮಾರ್ (ಘಟಂ)ಸಹಕರಿಸಿದರು.

Keshavananda BharatiSwamiji Chaturmasya Samaropa (3)
ಭಾನುವಾರ ಸಂಜೆ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಚಾಪರ್ಕ ತಂಡದಿಂದ “ಪಣಿಯೆರಾವಂದಿನ” ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.
ಇಂದಿನ ಕಾರ್ಯಕ್ರಮ ವಿಸ್ಮಯ:
ಸೋಮವಾರ ಸಂಜೆ ಶ್ರೀಮಠದ ಸಾಂಸ್ಕøತಿಕ ಸಂಜೆಯ ಅಂಗವಾಗಿ ಖ್ಯಾತ ಯಕ್ಷಿಣಿಗಾರ ಕುದ್ರೋಳಿ ಗಣೇಶ್ ಮತ್ತು ತಂಡದವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter