Published On: Sat, Sep 29th, 2018

ಅಡ್ಯನಡ್ಕ ಜನತಾ ಪ್ರೌಢಶಾಲಾ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ

ಅಡ್ಯನಡ್ಕ: ಕನ್ಯಾನ ಸರಕಾರಿ ಪ್ರೌಢಶಾಲೆಯಲ್ಲಿ ಸೆ.27 ಮತ್ತು ಸೆ.28ರಂದು ಜರುಗಿದ ವಿಟ್ಲ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಅಡ್ಯನಡ್ಕ ಜನತಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಈ ಬಾರಿಯೂ ಉತ್ತಮ ಸಾಧನೆ ನಿರ್ಮಿಸಿದ್ದು, ಹಲವು ಪ್ರಶಸ್ತಿಯನ್ನು ಪಡೆದಿದ್ದಾರೆ.

Zonal level achievement
17ರ ವಯೋಮಾನದೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರತೀಕ್ಷಾ ಅಡೆತಡೆ ಓಟ ಪ್ರಥಮ, ಕೋಲುಜಿಗಿತ ದ್ವಿತೀಯ, ತ್ರಿವಿಧ ಜಿಗಿತದಲ್ಲಿ ತೃತೀಯ; ತನುಶ್ರೀ ಪಿ. 3000 ಮೀ. ಓಟ ಪ್ರಥಮ, ಸಹನಾಕುಮಾರಿ ಜಾವೆಲಿನ್ ಎಸೆತ ಪ್ರಥಮ, ಡೀಪ್ನಾ ಡಿಸೋಜ ಕೋಲುಜಿಗಿತ ಪ್ರಥಮ, ಆಸಿಮತ್ ರಝಾನ ಸಿಎಚ್. 1500 ಮೀ. ಓಟ ದ್ವಿತೀಯ, ವಿಜೇತ ಎಂ. ಎತ್ತರ ಜಿಗಿತದಲ್ಲಿ ದ್ವಿತೀಯ, ಅಪೂರ್ವ ಎನ್ ತ್ರಿವಿಧ ಜಿಗಿತ ದ್ವಿತೀಯ, ಮಮತಾ ಜಾವೆಲಿನ್ ಎಸೆತ ತೃತೀಯ ಬಹುಮಾನ ಪಡೆದಿದ್ದಾರೆ.
17ರ ವಯೋಮಾನದೊಳಗಿನವರ ಬಾಲಕರ ವಿಭಾಗದಲ್ಲಿ ಪ್ರಜ್ವಲ್ ಕೆ.ಎಸ್. 3000 ಮೀ. ಓಟ ದ್ವಿತೀಯ, ಹರ್ಷಿತ್ ಕುಮಾರ್ ಸಿ.ಎಚ್. ಚಕ್ರ ಎಸೆತ ದ್ವಿತೀಯ, ಅಕ್ಷಯಕುಮಾರ್ ಆರ್. 3000 ಮೀ ಓಟ ತೃತೀಯ, ಮಹೇಶ್ ಸಿ. 200 ಮೀ ಓಟ ತೃತೀಯ ಬಹುಮಾನ ಪಡೆದಿದ್ದಾರೆ. 14ರ ವಯೋಮಾನದೊಳಗಿನ ಬಾಲಕಿಯರ ವಿಭಾಗದಲ್ಲಿ ಆಯಿಶತ್ ತೌಸೀರಾ ಎತ್ತರ ಜಿಗಿತದಲ್ಲಿ ದ್ವಿತೀಯ, ನೌಶೀನ ಅಡೆತಡೆ ಓಟ ತೃತೀಯ, ಆಯಿಷಾ ಶಮ್ನಾಝ್ ಎ.ಎ. ಚಕ್ರ ಎಸೆತ ದ್ವಿತೀಯ ಮತ್ತು ಗುಂಡೆಸೆತ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಮುಖ್ಯೋಪಾಧ್ಯಾಯರಾದ ಟಿ.ಆರ್. ನಾಯ್ಕ್ ನೇತೃತ್ವದಲ್ಲಿ ದೈಹಿಕ ಶಿಕ್ಷಕರಾದ ಉದಯಕೃಷ್ಣ ಭಟ್ ಪಿ. ಅವರು ತರಬೇತಿ ನೀಡಿದ್ದು, ಶಿಕ್ಷಕಿ ಕುಸುಮಾವತಿ ತಂಡದ ವ್ಯವಸ್ಥಾಪಕಿಯಾಗಿದ್ದಾರೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter