ಪಲ್ಲತಡ್ಕ: ಇಲ್ಲಿನ ಎ.ಯು.ಪಿ.ಶಾಲೆ ಯಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಮಕ್ಕಳು ಅಧ್ಯಾಪಕರಿಗೆ ಹೂ, ಶುಭಾಶಯ ಪತ್ರ ಗಳನ್ನು ವಿನಿಮಯ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.
ಅಧ್ಯಾಪಕರು ತರಗತಿಗೆ ಆಗಮಿಸುತ್ತಲೇ ಮಕ್ಕಳು ಹೂ ಹಾಗೂ ಹೂಗುಚ್ಛಗಳೊಂದಿಗೆ ತರಗತಿಗೆ ಬರಮಾಡಿಕೊಂಡರು. ಅಧ್ಯಾಪಕರು ಸಂತಸದಿಂದ ಮಕ್ಕಳ ಪ್ರೀತಿಯ ಕಾಣಿಕೆಯನ್ನು ಸ್ವೀಕರಿಸಿ, ಸಿಹಿಯನ್ನು ಹಂಚಿದರು. ಈ ಸಂದರ್ಭದಲ್ಲಿ ಅಧ್ಯಾಪಕರು ಮಕ್ಕಳೊಂದಿಗೆ ಫೋಟೋ ಗಳನ್ನು ಕ್ಲಿಕ್ಸಿದರು.
ಈ ರೀತಿ ಸಮಾಜದ ಅತ್ಯುತ್ತಮ ಬೆಳವಣಿಗೆಗೆ ಒಳ್ಳೆಯ ಪ್ರಜೆಗಳ ನ್ನು ರೂಪಿಸುವ ಕರ್ತವ್ಯವನ್ನು ಶಿಕ್ಷಕರದು.
ಅಧ್ಯಾಪನ ವೃತ್ತಿ ಯ ಮಹತ್ವ ವನ್ನು ಸಾರುವ ಶಿಕ್ಷಕರ ದಿನವನ್ನು ಮಕ್ಕಳೊಂದಿಗೆ ಎಲ್ಲಾ ಅಧ್ಯಾಪಕರು ಅರ್ಥಪೂರ್ಣ ವಾಗಿ ಆಚರಿಸಬೇಕು.



