blodd

ಕೈಕಂಬ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈಂಕಬ ವಲಯ ಸಮಿತಿಯಿಂದ ‘ಜನಾರೋಗ್ಯವೇ ರಾಷ್ಟ್ರ ಶಕ್ತಿ’ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಸಹಯೋಗದಿಂದ ಡಿ.31ರಂದು ಇಲ್ಲಿನ ಗ್ಯಾಲಕ್ಸಿ ಹಾಲ್ ನಲ್ಲಿ ‘ಬೃಹತ್ ರಕ್ತದಾನ ಶಿಬಿರ’ ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 8;30ಕ್ಕೆ ಶಿಬಿರಕ್ಕೂ ಮುನ್ನ ನೆಡುಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಫ್ಐ ಮೂಡಬಿದ್ರೆ ವಿಭಾಗದ ಅಧ್ಯಕ್ಷ  ಅಬೂಬಕ್ಕರ್ ವಾಮಂಜೂರು ವಹಿಸಲಿದ್ದು, ಗುರುಕಂಬಳ ಜಾಮೀಯಾ ಮಸ್ಜಿದ್ ಖತೀಬ್ ಹಾಫಿಝ್ ಶೇಖ್ ಮೊಹಮ್ಮದ್ ಫಿರೋಝ್ ದುವಾಶೀರ್ವಚನ ನೆರವೇರಿಸಲಿದ್ದಾರೆ.

ಮುಖ್ಯ ಅಥಿತಿಗಳಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಾ ತಜ್ಞೆ ಹಾಗೂ ಜಿಲ್ಲಾ ಸರಕಾರಿ ಆಸ್ಪತ್ರೆ ನಿರ್ವಾಹಕಿ ಡಾ.ರಾಜೇಶ್ವರಿ ದೇವಿ ಎಚ್.ಆರ್, ರೋಸಾ ಮಿಸ್ತಿಕಾ ಪಿಯು ಕಾಲೇಜಿನ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲೀಜಾ ಉಪಸ್ಥಿತರಿರುವರು.

ಸೂರಲ್ಪಾಡಿ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ, ಗಂಜಿಮಠ ಗ್ರಾ.ಪಂ.ಉಪಾಧ್ಯಕ್ಷ ಝಾಕೀರ್ ಸೂರಲ್ಪಾಡಿ, ಗುರುಕಂಬಳ ಎಕೆಯು ಪ್ರೌಢ ಶಾಲೆ ಮಾಜಿ ಉಪನ್ಯಾಸಕ ಮಾದಮಯ್ಯ, ಕರಿಯಂಗಳ ಗ್ರಾ.ಪಂ.ಸದಸ್ಯ ನವಾಝ್ ಬಡಕಬೈಲ್, ಸೂರಲ್ಪಾಡಿ ಸಿಎಫ್ಐ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಆಲಂ ನವಾಝ್, ಗುರುಕಂಬಳ ನೈಟ್ರೇಡರ್ಸ್ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಮೊಹಮ್ಮದ್ ಇರ್ಫಾನ್ ಹಾಗೂ ಎಸ್ ಡಿಪಿಐ ಕೈಕಂಬ ವಲಯಾಧ್ಯಕ್ಷ ಅಬ್ದುಲ್ ಖಾದರ್ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

 

By suddi9

Leave a Reply

Your email address will not be published. Required fields are marked *