ಕೈಕಂಬ: ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಜನ್ ವತಿಯಿಂದ ಡಿ.31ರಂದು ಇಲ್ಲಿನ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಪ್ರತಿಭೋತ್ಸವ-17’ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಗ್ಗೆ 8;30ಕ್ಕೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋ ನೆರವೇರಿಸಲಿದ್ದು, ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಜನ್ ಅಧ್ಯಕ್ಷ ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅಥಿತಿಗಳಾಗಿ ಕೈಕಂಬ ಮರ್ಕಝ್ ಅಧ್ಯಕ್ಷ ಬದ್ರುದ್ದೀನ್ ಅಝ್ ಹರಿ ಅಲ್ ಕಾಮಿಲ್, ಎಸ್ಸೆಸ್ಸೆಫ್ ಕೈಕಂಬ ಸೆಕ್ಟರ್ ಅಧ್ಯಕ್ಷ ರಿಯಾಝ್ ಸಅದಿ ಗುರುಪುರ, ಪೊಂಪೈ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸ್ಟೀಫನ್ ಮೆಂಡೀಸ್, ಶಾಲಾ ಮುಖ್ಯೋಪಾಧ್ಯಯ ಮಹೇಶ್ ಶೆಟ್ಟಿ, ಶಾಲಾ ಉಪನ್ಯಾಸಕ ಶಾಫಿ ಮದನಿ ಕಂದಾವರ, ಯುವ ಕಾಂಗ್ರಸ್ ದ.ಕ.ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಜಿ.ಪಂ. ಸದಸ್ಯ ಯು.ಪಿ.ಇಬ್ರಾಹೀಂ, ಗಂಜಿಮಠ ಗ್ರಾ.ಪಂ.ಉಪಾಧ್ಯಕ್ಷ ಝಾಕೀರ್ ಸೂರಲ್ಪಾಡಿ, ಉಮರಾ ನಾಯಕರಾದ ಅಬ್ದುಲ್ ಅಝೀಝ್ ವೆಂಝ್, ಅಬ್ದುಲ್ ಅಝೀಝ್ ಮೆಗಾ, ಎಂ. ಅಹ್ಮದ್ ಹಾಜಿ ಅಮಾನುಲ್ಲಾ ಹಾಗೂ ಅಬ್ದುರ್ರಹ್ಮಾನ್ ಮೂನ್ ಇನ್ನಿತರರು ಭಾಗವಹಿಸಲಿದ್ದಾರೆ.
ಇದೇ ವೇಳೆ ಎಸ್ಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಸಂದೇಶ ಭಾಷಣ ನೀಡಲಿದ್ದಾರೆ ಎಂದು ಪ್ರತಿಭೋತ್ಸವ ನಿರ್ವಹಣಾ ಸಮಿತಿ ಕನ್ವೀನರ್ ಉವೈಸ್ ಮಾಸ್ಟರ್ ಉದ್ದಬೆಟ್ಟು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

