ಫರಂಗಿಪೇಟೆ: ಟಿಪ್ಪುಜಯಂತಿ ಆಚರಣೆ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಂದ ನ.9ರಂದು ಪಥಸಂಚಲನ ನಡೆಯಿತು. ಫರಂಗಿಪೇಟೆಯಿಂದ ಸುಜೀರ್ ಪೆಟ್ರೋಲ್ ಪಂಪ್ ವರೆಗೆ ಸಾಗಿ , ಫರಂಗಿಪೇಟೆ ಹಳೇ ಮಾರ್ಗವಾಗಿ, ಫರಂಗಿಪೇಟೆ ಜಂಕ್ಷನ್ ವರೆಗೆ ಪಥಸಂಚಲನ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ವೃತ್ತ ನಿರೀಕ್ಷ ಮಂಜಯ್ಯ, ಬಂಟ್ವಾಳ ಗ್ರಾಮೀಣ ಠಾಣೆ ಎಸ್ಸೈ ರಕ್ಷಿತ್ ಗೌಡ, ನಗರ ಠಾಣೆ ಎಸ್ಸೈ ನಂದಕುಮಾರ್ ನೇತೃತ್ವ ವಹಿಸಿದ್ದರು.


