ಫರಂಗಿಪೇಟೆ: ಹನುಮಾನ್ ಸ್ಪೋರ್ಟ್ಸ್ ಕ್ಲಬ್ ತುಪ್ಪೆಕಲ್ಲು ಇದರ ಸದಸ್ಯರು ತುಪ್ಪೆಕಲ್ಲಿನಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಸದಸ್ಯರು ದೀಪವನ್ನು ಕೈಯಲ್ಲಿ ಹಿಡಿದು ದೀಪಾವಳಿ ಹಬ್ಬವನ್ನು ಭಾರತೀಯ ಸೈನಿಕರಿಗೆ ಅರ್ಪಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಜೇಶ್ ತುಪ್ಪೆಕಲ್ಲು, ಉಪಾಧ್ಯಕ್ಷರಾದ ಮನೋಜ್ ಮತ್ತು ಸಚಿನ್ ತುಪ್ಪೆಕಲ್ಲು, ಜೊತೆ ಕಾರ್ಯದರ್ಶಿ ಗಣೇಶ್ ತುಪ್ಪೆಕಲ್ಲು, ಜೊತೆ ಕೋಶಾಧಿಕಾರಿ ಪ್ರಮೋದ್ ತುಪ್ಪೆಕಲ್ಲು, ಸಂಘದ ಹಿರಿಯ ಸಲಹೆಗಾರ ಸಂದೇಶ್ ತುಪ್ಪೆಕಲ್ಲು, ಸಂಘಟನಾ ಕಾರ್ಯದರ್ಶಿ ತಿಲಕ್ ರಾಜ್ ಮತ್ತು ಗ್ರಾಂ.ಪಂ ಸದಸ್ಯ ಸಂತೋಷ್ ತುಪ್ಪೆಕಲ್ಲು, ಮುಖೇಶ್ ಮತ್ತಿತರರು ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

