ಫರಂಗಿಪೇಟೆ: ಸಿಒಡಿಪಿ ಸಂಘ ಇದರ ನೇತೃತ್ವದಲ್ಲಿ ಅರ್ಕುಳ ಅಂಗನವಾಡಿ ಶಾಲೆಯಲ್ಲಿ ಶಾಲಾ ಮಕ್ಕಳು ಹಾಗೂ ಅವರ ಹೆತ್ತವರು ಸೇರಿ ಮಕ್ಕಳಾ ದಿನಾಚರಣೆ ಮತ್ತು ದೀಪಾವಳಿಯನ್ನು ನ. 14ರಂದು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

arkula-2

ಮಕ್ಕಳ ದಿನಾಚರಣೆ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮವಾಗಿದ್ದು, ನಮ್ಮ ನಮ್ಮ ಮನೆಯಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು ಕಲಿಸಿಕೊಡಬೇಕು. ಮಕ್ಕಳು ಕಲಿತು ಡಾಕ್ಟರ್ ಇಂಜಿನಿಯರ್ ಆಗುವುದಲ್ಲ, ಪ್ರತಿಯೊಂ ಮನೆಯಲ್ಲಿ ಒಬ್ಬರಾದರೂ ನಮ್ಮ ದೇಶ ರಕ್ಷಿಸುವ ಸೈನಿಕರಾಗಬೇಕು ಇದನ್ನು ಮಕ್ಕಳಿಗೆ ಚಿಕ್ಕದಿರುವಾಗಲೇ ಹೇಳಿಕೊಡಬೇಕು. ಹಾಗೂ 500 ಮತ್ತು 1000 ನೋಟು ನಿಷೇಧ ಹಿನ್ನಲೆಯ ಬಗ್ಗೆ ಮಾತಾನಾಡುತ್ತಾ ನೋಟುಗಳನ್ನು 500 ಮತ್ತು 1000 ನೋಟುಗಳನ್ನು ರದ್ದು ಮಾಡಿದರೆಂದು ಹೆದರುವಂತ ಅವಶ್ಯಕತೆ ಇಲ್ಲ. ಸ್ವಲ್ಪ ದಿನ ಎಲ್ಲರಿಗೂ ಕಷ್ಟವಾಗಬಹುದು. ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಒಳ್ಳೆಯ ಕೆಲಸಗಳನ್ನು ಮಾಡಿದ್ದುದು ಮುಂದಿನ ದಿವಸದಲ್ಲಿ ಎಲ್ಲರಿಗೂ ಒಳ್ಳೆಯದಾಗಿದೆ ಎಂದು ಬಿಜೆಪಿ ಜಿಲ್ಲಾ  ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು  ಶುಭ ಹಾರೈಸಿದರು.

arkula

ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ  ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ತುಪ್ಪೆಕಲ್ಲು, ಸಿಒಡಿಪಿ ಕಾರ್ಯಕರ್ತೆ ಅರುಣ ಅಜ್ಜಿಬೆಟ್ಟು, ಅಂಗನವಾಡಿ ಶಿಕ್ಷಕಿ ಪದ್ಮಾವತಿ, ಪವಿತ್ರ ಅರ್ಕುಳ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *