ಮಹಿಷನನ್ನು ಮರ್ಧಿಸಿದದ ದೇವಿ: ಭಕ್ತಿಯ ಪರಾಕಾಷ್ಠೆಗೆ ತಲುಪಿಸಿದ ದೇವಿಮಹಾತ್ಮೆ
ಸುದ್ದಿ 9 ಕೈಕಂಬ: ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಆದಿಮಾಯೆ ತನ್ನ ಮಕ್ಕಳಾದ ಹರಿ, ಹರ, ಬ್ರಹರಿಗೆ ಒಂದೊಂದು ಕರ್ತವ್ಯಗಳನ್ನು ಕೊಟ್ಟು ಅಂತರ್ಧಳಾಗುತ್ತಾಳೆ. ಆದರೆ ಬರಬರುತ್ತಾ ಮಹಿಷನಿಂದ ಉಪಟಳ ತಾಳಲಾರದೆ ದೇವತೆಗಳು ಮತ್ತೆ ಆದಿಮಾಯೆಯನ್ನು ಮೊರೆ ಹೋದಾಗ ಆದಿಮಾಯೆ ಸಾಕ್ಷಾತ್ ಬೆಳ್ಳಿಯ ಉಯ್ಯಾಲೆಯಲ್ಲಿ ಕದಂಬವನದಲ್ಲಿ ಪ್ರತ್ಯಕ್ಷಳಾಗಿ ಲೋಕಕ್ಕೆ ಕಂಟಕನಾಗಿದ್ದ ಮಹಿಷಾಸುರನ ಮರ್ಧನ ಮಾಡುತ್ತಾಳೆ. ಜೊತೆಗೆ ಚಂಡ, ಮುಂಡ, ರಕ್ತಬೀಜಾಸುರನನ್ನು ಸಂಹಾರ ಮಾಡಿ ಜನರಿಗೆ ನೆಮ್ಮದಿಯನ್ನು ತರುತ್ತಾಳೆ….
ಪುರಾಣ ಲೋಕಕ್ಕೆ ಕೊಂಡೊಯ್ದ ಪೌರಾಣಿಕ ಕಥೆಯನ್ನು ದಿ| ಶ್ರೀಮತಿ ಮತ್ತು ದಿ| ಚಂದಪ್ಪ ಪೂಜಾರಿಯವರ ಸ್ಮರಣಾರ್ಥ ಅವರ ಮಕ್ಕಳಾದ ಶ್ರೀಮತಿ ಮತ್ತು ಶ್ರೀ ಕೆ. ಲೋಕೇಶ್ ಮತ್ತು ಸಹೋದರರು ಹಾಗೂ ಸಹೋದರಿಯರು ಯಕ್ಷಗಾನ ಬಯಲಾಟವಗಿ ಹರಕೆಯ ರೂಪದಲ್ಲಿ ಸಲ್ಲಿಸಿ ಇಡೀ ಕೈಕಂಬದಲ್ಲಿ ಹಬ್ಬದ ವಾತಾವರಣವನ್ನು ಉಂಟುಮಾಡಿದರು.
ಕೈಕಂಬದಲ್ಲಿ ನಡೆಯುವ ಈ ಯಕ್ಷಗಾನ ಬಯಲಾಟಕ್ಕೆ ದಾಖಲೆಯ ಪ್ರಮಾಣದಲ್ಲಿ ಜನರು ಸೇರುತ್ತಿರುವುದು ವಿಶೇಷ. ಮಹಿಷಾಸುರನ ಪಾತ್ರಧಾರಿ ಗತ್ತು, ಗಂಭೀರ್ಯ, ಅಟ್ಟಹಾಸ ಎದೆಯನ್ನು ನಡುಗಿಸುವಂತಿತ್ತು. ದೇವಿಯ ಪಾತ್ರಧಾರಿ ಸಾಕ್ಷಾತ್ ದೇವಿಯನ್ನೇ ನೆನಪಿಸುವಂತೆ ಮಾಡಿತ್ತು.
ಸಿಡಿಮದ್ದುಗಳನ್ನು ಸಿಡಿಸಿದ್ದು ಯಕ್ಷಗಾನಕ್ಕೆ ಇನ್ನಷ್ಟು ಮೆರುಗನ್ನು ನೀಡಿತ್ತು. ವಿದ್ಯುದಲಂಕಾರ, ಭಾಗವತರ ತಾಳ, ಮುಮ್ಮೇಳ ಎಲ್ಲವೂ ಯಕ್ಷಪ್ರಿಯರನ್ನು ಯಕ್ಷಲೋಕಕ್ಕೆ ಕೊಂಡೊಯ್ಯುವಂತಿತ್ತು. ಅಲ್ಲದೆ ಎಲ್ಲರನ್ನೂ ಭಕ್ತಿಯ ಪರಾಕಾಷ್ಠೆಗೆ ತಲುಪಿಸಿತ್ತು.





