ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ

ಮೂಡುಬಿದಿರೆ: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯಿಂದ ಒಂಟಿಕಟ್ಟೆಯ ವೀರರಾಣಿ ಅಬ್ಬಕ್ಕ ಸಂಸ್ಕ್ರತಿ ಗ್ರಾಮದ ಕಡಲಕೆರೆ ನಿಸರ್ಗಧಾಮದಲ್ಲಿ ಹನ್ನೆರಡನೇ ವರ್ಷದ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳೋತ್ಸವ ಶನಿವಾರ(ಜ.25) ಪ್ರಾರಂಭಗೊಂಡಿತು.

ಅಲಂಗಾರು ಚಚರ್ಿನ ಧರ್ಮಗುರು ರೆ.ಫಾ ಬೇಸಿಲ್ ವಾಸ್, ಅಲಂಗಾರು ಬಡಗು ಮಹಾಲಿಂಗೇಶ್ವರ ದೇವಸ್ಥಾನದ ವೆ.ಮೂ ಈಶ್ವರ ಭಟ್, ಪುತ್ತಿಗೆಯ ಜನಾಬ್ ಇ.ಎಂ.ಶಾಫೊ ಸಾಬ್ ಕಂಬಳಕ್ಕೆ ಚಾಲನೆ ನೀಡಿದರು.

ಕಂಬಳ ಸಮಿತಿಯ ಅಧ್ಯಕ್ಷ, ರಾಜ್ಯ ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ , ಜಿಲ್ಲಾ ಕಂಬಳ ಸಮಿತಿಯ ಪ್ರ.ಕಾರ್ಯದಶರ್ಿ ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಭಾಸ್ಕರ್.ಎಸ್. ಕೋಟ್ಯಾನ್, ಪ್ರಧಾನ ಕಾರ್ಯದಶರ್ಿ ಸುರೇಶ್.ಕೆ.ಪೂಜಾರಿ, ಪದಾಧಿಕಾರಿಗಳಾದ ಚಂದ್ರಹಾಸ ಸನಿಲ್, ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್, ಪ್ರೇಮನಾಥ ಮಾರ್ಲ, ಪುರಸಭಾ ಮುಖ್ಯಾಧಿಕಾರಿ ರಾಯಪ್ಪ, ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಸದಸ್ಯರಾದ ಅನಿಲ್ ಲೋಬೋ, ಕೊರಗಪ್ಪ, ಮೊದಲಾದವರು ಉಪಸ್ಥಿತರಿದ್ದರು.

ಅಶು ಬೆದ್ರ ನಿಮರ್ಾಣದ ಜೀ ಕನ್ನಡ ವಾಹಿನಿಯ ರಾಧಕಲ್ಯಾಣ ದಾರಾವಾಹಿ ತಂಡ ಸಮಾರಂಭದಲ್ಲಿ ಪಾಲ್ಗೊಂಡಿತು.



kambala 2


kambala 1

kambala3


By suddi9

Leave a Reply

Your email address will not be published. Required fields are marked *