ಮೂಡುಬಿದರೆ ಪುರಸಭೆಯಲ್ಲಿ ಗಣರಾಜೋತ್ಸವ

ಮೂಡುಬಿದರೆ: ಜಗತ್ತಿನಲ್ಲಿ ಪ್ರಜಾಪ್ರಭುತ್ವವುದು ಉಳಿಯಲು ಮುಖ್ಯ ಕಾರಣ ನಮ್ಮ ಸಂವಿಧಾನ ಎಂದು ವಕೀಲ, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ನುಡಿದರು.

ಮೂಡುಬಿದರೆ ಪುರಸಭೆಯಲ್ಲಿ ಭಾನುವಾರ ನಡೆದ 65ನೇ ಗಣರಾಜೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಭಯೋತ್ಸಾದನೆ ಹಾಗೂ ಭ್ರಷ್ಟಾಚಾರ ನಿಮರ್ೂಲನವಾದಲ್ಲಿ ನಮ್ಮ ದೇಶ ಜಗತ್ತಿನಲ್ಲಿ ನಂ.1 ಆಗುವುದರಲ್ಲಿ ಸಂಶಯವಿಲ್ಲ. ಲೋಕಾಯುಕ್ತ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಲ್ಲಿ ಭ್ರಷ್ಟಾಚಾರ ನಿಮರ್ೂಲನಗೊಳಿಸಬಹುದು. ಭಯೋತ್ಪಾದನೆಯನ್ನು ತಡೆಯಲು ಕೂಡ ಕ್ರಮ ಕೈಗೊಳ್ಳಬಹುದು ಎಂದರು.

ಪ್ರಥಮ ದಜರ್ೆ ಕಂದಾಯ ನಿರೀಕ್ಷಕ ಧನಂಜಯ ಬಿ.ಡಿ ಧ್ವಜಾರೋಹಣಗೈದರು. ಪುರಸಭಾ ಸದಸ್ಯೆ ರೂಪಾ.ಎಸ್.ಶೆಟ್ಟಿ, ಪ್ರಥಮ ದಜರ್ೆ ಸಹಾಯಕಿ ಮಾಲಿನಿ, ಇಂಜಿನಿಯರ್ ಪದ್ಮನಾಭ, ತೆರಿಗೆ ವಸೂಲಿದಾರ ಪ್ರಕಾಶ್, ಆರೋಗ್ಯ ನಿರೀಕ್ಷಕ ಶಾಜಿದ್, ಇಂದು, ಸಮುದಾಯ ಸಂಘಟಕ ಮುರುಳೀಧರ, ಸ್ಥಳೀಯ ಹಿರಿಯ ಪ್ರಾಥಮಿಕ ಶಾಲೆ ಥಡರ್್ನ ಶಿಕ್ಷಕಿ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.

ಪುರಸಭಾ ಸದಸ್ಯರು ಗೈರು:
ಮೂಡುಬಿದರೆ ಪುರಸಭೆಯ ಚುನಾಯಿತ 22 ಸದಸ್ಯರಲ್ಲಿ ಗಣರಾಜೋತ್ಸವಕ್ಕೆ ಬಂದವರು ಕೇವಲ ಇಬ್ಬರು. ಈ ಬಾರಿಯ ಗಣರಾಜೋತ್ಸವ ಭಾನುವಾರವಿದ್ದರೂ, ಪುರಸಭೆಯಲ್ಲಿ ಮುಂಜಾನೆ 8 ಗಂಟೆಗೆ ದ್ವಜಾರೋಹಣವಿದ್ದರೂ ಸದಸ್ಯರ ಪತ್ತೆಯಿಲ್ಲ. ಇವರಿಗಿಂತ ತಾವೇನು ಕಡಿಮೆ ಎನ್ನುವ ಪುರಸಭೆಯ 35 ಸಿಬ್ಬಂದಿಗಳಲ್ಲಿ 6 ಜನ ಮಾತ್ರ ಉಪಸ್ಥಿತರಿದ್ದರು. 15 ನಿಮಿಷಗಳ ಕಾಲ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೈರಾಗಿರುವುದು ಜನಪ್ರತಿನಿಧಿಗಳ ಹಾಗೂ ಸಕರ್ಾರಿ ನೌಕರರ ಉದಾಸೀನತೆ ತೋರಿಸುತ್ತದೆ.27 ganarajosthava

By suddi9

Leave a Reply

Your email address will not be published. Required fields are marked *