ಫರಂಗಿಪೇಟೆ: ಲೋಕ ಕಲ್ಯಾಣ ದ ಸದುದ್ದೇಶ ದಿಂದ ಮಾರ್ಚ್ 27 ರಂದು ತುಂಬೆ ವಳವೂರು ಗದ್ದೆ ಯಲ್ಲಿ ಆಯೋಜಿಸ ಲಾದ ಶ್ರೀ ರಾಮ ನಾಮ ತಾರಕ ಜಪ ಯಜ್ಞ ದ ಸಲುವಾಗಿ ರಾಮಲ್ ಕಟ್ಟೆ ಯಲ್ಲಿ ಕಾರ್ಯಾಲಯ ವನ್ನು ಕಶೆ ಕೋಡಿ ಸೂರ್ಯ ನಾರಾಯಣ ಭಟ್ ದೀಪ ಪ್ರಜ್ವಲಿಸಿ ಉದ್ಘಾಟನೆ ಮಾಡುವ ಮೂಲಕ ಚಾಲನೆ ನೀಡಿದರು .
ಬಳಿಕ ತುಂಬೆ ಶಾರದಾ ಮಹೋತ್ಸವ ಸಭಾಂಗಣ ದಲ್ಲಿ ನಡೆದ ಮಾತೃ ಸಂಗಮದಲ್ಲಿ ರಾಮ ನಾಮ ಜಪ ಯಜ್ಞ ದ ಮಹತ್ವ ಮತ್ತು ಜಪಾನುಷ್ಟಾನದ ಅರಿವು ಕಶೆ ಕೋಡಿ ಸೂರ್ಯ ನಾರಾಯಣ ಭಟ್ ನೀಡಿದರು . ಈ ಸಂದರ್ಭ ದಲ್ಲಿ ರಾಷ್ಟೀಯ ಸ್ವಯಂ ಸೇವಕ ಸಂಘದ ಬಂಟ್ವಾಳ ತಾಲೂಕ್ ಸಂಘ ಚಾಲಕ್ ಶ್ರೀಮಾನ್ ಕೊಡಮಣ್ಣು ಕಾಂತಪ್ಪ ಶೆಟ್ಟಿ ,ಶ್ರೀ ರಾಮ ನಾಮ ತಾರಕ ಜಪ ಯಜ್ಞ ಸಮಿತಿ ಅದ್ಯಕ್ಷ ಉಮೇಶ್ ಸುವರ್ಣ ,ಸಂಚಾಲಕ ರಾದ ದಾಮೋದರ ನೆತ್ತರಕೆರೆ , ಅರುಣ್ ಕುಮಾರ್ ಶೆಟ್ಟಿ ನುಳಿಯಾಲ್ ಗುತ್ತು , ಎಂ ಆರ್ ನಾಯರ್ , ಶೋಭಾ ಜಿ ಮೈಂದನ್ , ಸುಂದರ ಶೆಟ್ಟಿ ಕಲ್ಲತಡಮೆ , ನವೀನ ಕಲ್ಲಗುಡ್ಡೆ, ಗಣೇಶ್ ಸುವರ್ಣ , ಪ್ರವೀಣ್ ಬಿ ತುಂಬೆ ಅಲ್ಲದೆ ನೂರಾರು ಮಾತೆಯರು ಉಪಸ್ಥಿತರಿದ್ದರು.

