ಫರಂಗಿಪೇಟೆ: ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ – ಫರಂಗಿಪೇಟೆ ಇಲ್ಲಿ ೫ ಲಕ್ಷ ವೆಚ್ಚ ದ ನೂತನ ಅಕ್ಷರ ದಾಸೋಹ ಕೊಠಡಿ ಯನ್ನು ಶಾಲಾ ಆಡಳಿತ ಮಂಡಳಿ ಅದ್ಯಕ್ಷರಾದ ಅರ್ಕುಳ ಬೀಡು ಶ್ರೀ ವಜ್ರನಾಭ ಶೆಟ್ಟಿ ಇವರು ಉದ್ಘಾಟಿಸಿದರು ಕಾರ್ಯಕ್ರಮ ದಲ್ಲಿ ಶಾಲಾ ಕೌನ್ಸಿಲ್ ಶ್ರೀ ಎ ಕೆ ಜಯರಾಮ ಶೇಖ , ಕೊಟ್ಟಿಂಜ ವಿಶ್ವನಾಥ ಶೆಟ್ಟಿ , ಶ್ರೀ ಹಸನಬ್ಬ , ಸಿ ಅರ್ ಪಿ ಶ್ರೀಮತಿ ಗೀತ ಶಾಲಾ ಮುಖ್ಯ ಶಿಕ್ಷಕ ಶ್ರೀ ಕೆ ಆರ್ ದೇವದಾಸ್ ಮತ್ತಿತರರು ಉಪಸ್ಥಿತರಿದ್ದರು

