ಫರಂಗಿಪೇಟೆ: ಪತಂಜಲಿ ಯೋಗ ಸಮಿತಿ ಶಿರಸಿ ಮತ್ತು ವಿಶ್ವ ಹಿಂದೂ ಪರಿಷತ್ – ಭಜರಂಗ ದಳ – ದುರ್ಗಾ ವಾಹಿನಿ ಛತ್ರಪತಿ ಶಿವಾಜಿ ಶಾಖೆ ಕುಮ್ಡೇಲು ಇವರ ವತಿಯಿಂದ ಒಂದು ವಾರಗಳ ಕಾಲ ನಡೆದ ಉಚಿತ ಯೋಗ ಶಿಬಿರ ದ ಸಮಾರೋಪ ಸಮಾರಂಭವು ಕುಮ್ಡೇಲು ಕೋರ್ದಬ್ಬು ದೈವಸ್ಥಾನ ದಲ್ಲಿ ನಡೆಯಿತು .
ವಿಶ್ವ ಹಿಂದೂ ಪರಿಷತ್ ನ ಪ್ರಾಂತ ಕಾರ್ಯವಾಹ ರಾದ ಕೃಷ್ಣ ಮೂರ್ತಿ ಅವರು ಸಮಾರೋಪ ಭಾಷಣ ಮಾಡಿದರು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಸಂಪರ್ಕ ಪ್ರಮುಖ್ ಅಶೋಕ್ ಶೆಟ್ಟಿ ಸರಪಾಡಿ , ಯೋಗ ಗುರುಗಳಾದ ದೇವರಾಜ ಪ್ರಭು , ಸಹ ಯೋಗ ಶಿಕ್ಷಕ ಶ್ರೀನಿವಾಸ್ ಶೆಣೈ ,ಕುಮ್ಢೇಲು ಕೋರ್ದಬ್ಬು ದೈವಸ್ಥಾನ ದ ಮೊಕ್ತೇಸರ ರಾದ ಭಾಸ್ಕರ್ ಚೌಟ, ಭಜರಂಗ ದಳದ ಜಿಲ್ಲಾ ಸಹ ಸಂಚಾಲಕ ಭರತ್ ಕುಂಬ್ದೇಲು ಮತ್ತಿತರರು ಉಪಸ್ಥಿತರಿದ್ದರು.

