ಕಿನ್ನಿಗೋಳಿ ; ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್  ಸ್ಥಾವರ ಸ್ಥಾಪಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರು ಹತ್ತು ತಿಂಗಳ ಹಿಂದೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವ  ಸಂಗತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸಚಿವರು ತಕ್ಷಣ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕು ಎಂದು ನಳಿನ್ ಕುಮಾರ ಕಟೀಲ್ ಆಗ್ರಹಿಸಿದ್ದಾರೆ.

nalin kumarಅವರು ಕಿನ್ನಿಗೋಳಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಸರಕಾರ ತುಳುನಾಡನ್ನು ಪ್ರಯೋಗ ಶಾಲೆಯಂತೆ ಬಳಸುತ್ತಿದೆ  ಪ್ರತಿಯೋಂದು ಯೋಜನೆಗಳಿಗೂ ಕರಾವಳಿಯನ್ನು ಆರಿಸುವ ಮೂಲಕ ಜಿಲ್ಲೆಯ ಜನರಿಗೆ ಮೋಸಮಾಡುತ್ತದೆ ಎಂದು ಅಪಾದಿಸಿದರು. ಒಂದು ವೇಳೆ ದ.ಕ ಜಿಲ್ಲೆಯ ಜನರ ಹಿತಶಕ್ತಿಯ ವಿರುದ್ವಾಗಿ ನಡೆದಲ್ಲಿ ಉಗ್ರಹೋರಾಟ ಮಾಡುವುದಾಗಿ ಸರಕಾರವನ್ನು ಎಚ್ಚರಿಸಿದರು.ಪತ್ರಿಕಾಗೋಷ್ಟಿಯಲ್ಲಿ ಈಶ್ವರ್ ಕಟೀಲ್ ಕಸ್ತೂರಿ ಪಂಜ ,ಭುವನಾಭಿರಾಮ  ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *