ಮಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಟ್ಟಪ್ಪಣೆಯಂತೆ ಅಮೆರಿಕಾ ಮಾದರಿಯ ಆಂತರಿಕ ಚುನಾವಣೆಯನ್ನು ದಕ್ಷಿಣ ಕನ್ನಡ ಮತ್ತು ಬೆಂಗಳೂರು ಉತ್ತರ ಭಾಗದಲ್ಲಿ ನಡೆಸಲುದ್ದೇಶಿಸಲಾಗಿದೆ. ದ.ಕ ಮಂಗಳೂರು ಕ್ಷೇತ್ರದಲ್ಲಿ ಪಕ್ಷದ ಹಿರಿಯ ನಾಯಕ ಜನಾರ್ಧನ ಪೂಜಾರಿ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಕಾಂಗ್ರೆಸ್ ಲೋಕಸಭಾ ಟಿಕೆಟ್ ಆಕಾಂಕ್ಷಿಗಳಾದ್ದಾರೆ.pujari
ರಾಹುಲ್ ಗಾಂಧಿ ಮುಂದಿನ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡುವ ಬಗ್ಗೆ ಯೋಚಿಸುತ್ತಿದ್ದರೆ ಸ್ಥಳೀಯ ಕಾಂಗ್ರೆಸ್ ಸದಸ್ಯರು ಜನಾರ್ಧನ ಪೂಜಾರಿಯವರೇ ಉತ್ತಮ ಆಯ್ಕೆ ಎಂದು ವಾದಿಸುತ್ತಿದ್ದಾರೆ. ಹಾಗಾಗಿ ಇವರಿಬ್ಬರ ಮಧ್ಯೆ ಸೂಕ್ತ ಆಯ್ಕೆ ಯಾರೆಂಬುದನ್ನು ಮತದಾನದ ಮೂಲಕವೇ ತಿಳಿಯುವ ಯೋಚನೆಯನ್ನು ರಾಹುಲ್ ಮಾಡಿದ್ದಾರೆ. ಅದರಂತೆ ಮಾಚರ್್ 9ರಂದು ಆಂತರಿಕ ಮತದಾನ ನಡೆಯಲಿದ್ದು ಅದೇ ದಿನ ಸಂಜೆಯ ಸುಮಾರಿಗೆ ಫಲಿತಾಂಶ ಕೂಡಾ ಹೊರಬೀಳುವ ನಿರೀಕ್ಷೆಯಿದೆ

By suddi9

Leave a Reply

Your email address will not be published. Required fields are marked *