ಸಿಡ್ನಿ: ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿನಿಂದ 480 ಮಿಲಿಯನ್ ಪ್ರಾಣಿಗಳು ಬೆಂಕಿಗೆ ಆಹುತಿಯಾದ ಘಟನೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಆ ಘಟನೆ ಇನ್ನೂ ಕಣ್ಣೆದುರು ಇರುವ ಮೋದಲೆ ಆಸ್ಟ್ರೇಲಿಯಾ 10,000 ಒಂಟೆಗಳ ಮಾರಣಹೋಮ ನಡೆಸಲು ಸಿದ್ಧತೆ ನಡೆಸಿದೆ.

ಹೌದು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಕಾಡ್ಗಿಚ್ಚಿನಿಂದ ಸಾವಿರಾರು ಪ್ರಾಣಿಗಳು ಅಗ್ನಿ ದೇವನ ಕೆನ್ನಾಲಿಗೆಗೆ ತುತ್ತಾಗಿ ಪ್ರಾಣ ಬಿಟ್ಟಿದ್ದವು. ಇನ್ನು ಕೆಲ ಪ್ರಾಣಿಗಳನ್ನ ರಕ್ಷಣೆ ಮಾಡಲಾಗಿತ್ತು. ಅಲ್ಲದೆ ಈ ಘಟನೆಯಿಂದ 12 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಈಗ ಆ ಪ್ರದೇಶದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ 10 ಸಾವಿರ ಒಂಟೆಗಳನ್ನ ಕೊಲ್ಲಲು ಆಸ್ಟ್ರೇಲಿಯಾ ಸರ್ಕಾರ ನಿರ್ಧಾರ ಮಾಡಿದೆ.

download (3)

ಹೌದು ಆಸ್ಟ್ರೇಲಿಯಾದಲ್ಲಿ ಒಂಟೆಗಳ ಸಂಖ್ಯೆ ಹೆಚ್ಚಿದ್ದು, ಇದೀಗ ಇಂತಹ ಬಿಸಿ ವಾತಾವರಣದಲ್ಲಿ ಒಂಟೆಗಳು ಹೆಚ್ಚಿನ ಪ್ರಮಾಣದ ನೀರನ್ನು ಸೇವನೆ ಮಾಡುತ್ತಿದ್ದು,ಅಲ್ಲದೆ ಕಾಡ್ಗಿಚ್ಚು ಸಂಭವಿಸಿದ ಸುತ್ತಮುತ್ತಲ ಪ್ರದೇಶದ ಮನೆಗಳಿಗೆ ಒಂಟೆಗಳು ಬಂದು ಇರೋ-ಬರೋ ನೀರನ್ನೆಲ್ಲಾ ಕಾಲಿ ಮಾಡಿ ಹೋಗುತ್ತಿವೆಯಂತೆ. ಇದರಿಂದ ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗಲಾರಂಭಿಸಿದೆ. ಈ ಬಗ್ಗೆ ಇಲ್ಲಿನ ಸರ್ಕಾರ ಕಾರ್ಯಾಚರಣೆ ನಡೆಸಿ ಬರೋಬ್ಬರಿ 10 ಸಾವಿರ ಒಂಟೆಗಳನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರದ ಈ ನಿರ್ಧಾರಕ್ಕೆ ಪರಿಸರ ಪ್ರೇಮಿಗಳು ಹಾಗೂ ಪ್ರಾಣಿ ಪ್ರಿಯರು ವಿರೋಧ ವ್ಯಕ್ತ ಪಡಿಸಿದ್ದು. ಪ್ರಕೃತಿ ವಿಕೋಪಕ್ಕೆ ನಮ್ಮೀ ಪರಿಸರ ವಿರೋಧ ಕೃತ್ಯಗಳೇ ಕಾರಣ. ನಮಗೆ ಮುಂದೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಮೂಖ ಪ್ರಾಣಿಯನ್ನ ಕರುಣೆಯಿಲ್ಲದೆ ಕೋಲ್ಲುವುದು ಸರಿಯಲ್ಲ. ಪ್ರತಿಯೊಂದಕ್ಕೂ ಧನಾತ್ಮಕ ಪರಿಹಾರ ಇದ್ದೇ ಇರುತ್ತದೆ. ಅದನ್ನು ಹುಡುಕುವ ಬದಲು ಈ ರೀತಿ ಅಮಾನುಷ ನಿರ್ಧಾರ ಕೈಗೋಳ್ಳುವುದು ತಪ್ಪು ಎಂದು ಆಕ್ರೋಷ ವ್ಯಕ್ತ ಪಡಿಸಿದ್ದಾರೆ .

By suddi9

Leave a Reply

Your email address will not be published. Required fields are marked *